ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ಹಣ : ಅನಿವಾಸಿಗೆ ಕೇಂದ್ರದ ಅಭಯ

By Staff
|
Google Oneindia Kannada News

Salman Khurshid
ನವದೆಹಲಿ, ಜ. 8 : ಸತ್ಯಂ ಸಹೋದರ ಸಂಸ್ಥೆ ಮೇತಾಸ್ ರಿಯಲ್ ಎಸ್ಟ್ರೇಟ್ ಕಂಪನಿ ಮೇಲೆ ಅನಿವಾಸಿ ಭಾರತೀಯ ಹೂಡಿರುವ ಹಣ ಎಲ್ಲಿಯೂ ಹೋಗುವುದಿಲ್ಲ. ಹಣ ಹೂಡಿಕೆ ಮಾಡಿರುವವರಿಗೆ ಹಣ ಹಿಂದಿರುಗಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಪ್ರಾಮಾಣಿಕ ಮಾಡುತ್ತಿದೆ. ಹಣ ಹೂಡಿಕೆ ಮಾಡಿರುವವರ ಹಿತಾಸಕ್ತಿಗೆ ಅನುಗುಣವಾಗಿ ಕೇಂದ್ರ ಸರಕಾರ ಕಾರ್ಯನಿರ್ವಹಿಸಲಿದೆ ಎಂದು ಕಂಪನಿ ವ್ಯವಹಾರಗಳ ಖಾತೆ ಸಚಿವ ಸಲ್ಮಾನ್ ಖುರ್ಷೀದ್ ಭರವಸೆ ನೀಡಿದ್ದಾರೆ.

ಶುಕ್ರವಾರ ಇಲ್ಲಿ ಆಯೋಜಿಸಲಾಗಿದ್ದ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಸತ್ಯಂ ಹಗರಣ ಹಾಗೂ ಮೇತಾಸ್ ಪ್ರಕರಣವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದ್ದು, ಯಾರಿಗೂ ಅನ್ಯಾಯವಾಗದ ಹಾಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಇಂದಿನಿಂದ ಆರಂಭವಾಗಿರುವ ಪ್ರವಾಸಿ ಭಾರತೀಯ ದಿವಸ್ ದ ಇಡೀ ದಿನ ಸತ್ಯಂ ಹಾಗೂ ಮೇತಾಸ್ ಪ್ರಕರಣಗಳ ಬಗ್ಗೆ ಚರ್ಚೆ ನಡೆಯಿತು.

ಅನಿವಾಸಿಗಳಿಗೆ ಮತದಾನ ಹಕ್ಕು, ಪಿಎಂ

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು ನೀಡುವುದಾಗಿ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ. ಈ ಮೂಲಕ ಅನೇಕ ವರ್ಷಗಳಿಂದ ತಾಯಿನಾಡು ಬಿಟ್ಟು ಬಹುದೂರದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈ ಉಡುಗೊರೆ ನೀಡಲು ನಿರ್ಧರಿಸಿದೆ.

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಭಾರತೀಯರಿಗೆ ತಮ್ಮ ಹಕ್ಕು ಚಲಾಯಿಸುವ ಎಲ್ಲ ಅರ್ಹತೆಯೂ ಇದೆ. ಭಾರತೀಯರು ಎಲ್ಲೆ ನೆಲೆಸಿದ್ದರೂ ಅವರು ಭಾರತೀಯರೇ, ಸಂವಿಧಾನದಲ್ಲಿ ಕೂಡಾ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಿಸಲಿದೆ ಎಂದು ಸಿಂಗ್ ವಿವರಿಸಿದರು.

ಕಳೆದ ಅನೇಕ ವರ್ಷಗಳಿಂದ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಏಕೆ ಸ್ವದೇಶಕ್ಕೆ ಮರಳಬಾರದು? ದೇಶದ ರಾಜಕೀಯಕ್ಕೆ ಪ್ರಜ್ಞಾವಂತರ ಅವಶ್ಯಕತೆ ಇದೆ. ಭಾರತದ ಅಭಿವೃದ್ಧಿಗೆ ತಾವು ಶ್ರಮಿಸುವುದಾದರೆ ಇಲ್ಲಿ ವಿಪುಲ ಅವಕಾಶಗಳಿವೆ. ಬಂಡವಾಳ ಹೂಡುವುದಾಗಲಿ, ಉದ್ಯಮ ಸ್ಥಾಪನೆ ಮಾಡುವುದಾಗಲಿ, ಎಲ್ಲ ಕಾರ್ಯಗಳಿಗೂ ಸರಕಾರ ಅಗತ್ಯ ಸಹಕಾರ ನೀಡಲಿದೆ. ನೀವು ಇಲ್ಲಿಗೆ ಬನ್ನಿ ಎಂದು ಮನಮೋಹನ್ ಸಿಂಗ್ ಆಹ್ವಾನ ನೀಡಿದರು.

ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಸುಮಾರು 40 ದೇಶಗಳ 1,500 ಆಹ್ವಾನಿತರು ಪಾಲ್ಗೊಂಡಿದ್ದರು. ಪ್ರವಾಸಿ ಭಾರತೀಯ ದಿವಸದ ಮೊದಲ ದಿನದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಸತ್ಯಂ ಕರ್ಮಕಾಂಡದ ಬಗ್ಗೆ ಚರ್ಚೆ ನಡೆಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X