ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದು ದೇವತೆಗಳೊಂದಿಗೆ ಅಮೆರಿಕ ಅಂಚೆಚೀಟಿ

By Staff
|
Google Oneindia Kannada News

hindu gods on usa postage stamps
ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರಿಗಾಗಿ ಯುಎಸ್ ಎ ಪೋಸ್ಟೇಜ್.ಕಾಂ ಏಳು ಅಧ್ಯಾತ್ಮಿಕ ವಿನ್ಯಾಸದಲ್ಲಿ ಅಂಚೆ ಚೀಟಿಗಳನ್ನು ಹೊರತಂದಿದೆ. ಸಾಯಿಬಾಬಾ, ಮಹಾಲಾಕ್ಷ್ಮಿ, ಶ್ರೀ ವೆಂಕಟೇಶ್ವರ, ಸುಬ್ರಹ್ಮಣ್ಯ, ವಿನಾಯಕ, ಶಿವಪಾರ್ವತಿ, ಶ್ರೀಕೃಷ್ಣನ ಚಿತ್ರಗಳೊಂದಿಗೆ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಈ ರೀತಿಯ ಅಂಚೆಚೀಟಿಗಳನ್ನು ಹೊರತರುತ್ತಿರುವುದು. ಮತ್ತೆಲ್ಲೂ ಲಭ್ಯವಾಗದ ವಿಶಿಷ್ಟ ವಿನ್ಯಾಸಗಳಲ್ಲಿ ಈ ಅಂಚೆಚೀಟಿಗಳನ್ನು ರೂಪಿಸಲಾಗಿದೆ. ಉಡುಗೊರೆ ರೂಪದಲ್ಲಿ ಕೊಡಲು, ವಿಶೇಷ ಸಂದರ್ಭಗಳಲ್ಲಿ ಬರೆಯುವ ಪತ್ರಗಳಿಗೆ ಅಂಟಿಸಲು ಈ ಅಂಚೆಚೀಟಿಗಳನ್ನು ಬಳಸಿಕೊಳ್ಳಬಹುದು.

ಈ ರೀತಿಯ ವಿಭಿನ್ನ ಅಂಚೆಚೀಟಿಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಅಮೆರಿಕಾದಲ್ಲಿನ ಭಾರತೀಯರು ಇವುಗಳನ್ನು ಆನ್ ಲೈನ್ ನಲ್ಲಿ ಖರೀಸಬಹುದು. ಪ್ರತಿ ಅಂಚೆಚೀಟಿಯ ಮಖ ಬೆಲೆ 18.99 ಡಾಲರ್. ಭಾರತೀಯ ದೇವತೆಗಳು ಅಮೆರಿಕಾ ಅಂಚೆಚೀಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X