ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿತ್ತಲ್, ಫೋಸ್ಕೋ ಕಂಪನಿಗಳಿಗೆ ಅಸ್ತು

By Staff
|
Google Oneindia Kannada News

Govt clears ArcelorMittal, Posco's investment proposals
ಬೆಂಗಳೂರು, ಜ. 6 : ಜಗತ್ತಿನ ಅತಿ ದೊಡ್ಡ ಉಕ್ಕು ಕಂಪನಿ ಆರ್ಸೆಲರ್ ಮಿತ್ತಲ್ ಸೇರಿದಂತೆ ಹಲವಾರು ಕಂಪನಿಗಳು 1,38,322 ಕೋಟಿ ರುಪಾಯಿಗಳಷ್ಟು ಬಂಡವಾಳ ಹೂಡಲು ಮುಂದಾಗಿದ್ದು, ಇದಕ್ಕೆ ರಾಜ್ಯ ಸರಕಾರ ಉನ್ನತಾಧಿಕಾರ ಸಮಿತಿ ಮಂಗಳವಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆ ಅನೇಕ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿತು. ಮಿತ್ತಲ್ ಅಲ್ಲದೆ, ದಕ್ಷಿಣ ಕೋರಿಯಾ ಮೂಲದ ಫೋಸ್ಕೋ, ಮುಂಬೈನ ರಿಲಯನ್ಸ್, ತೈಲ ಉದ್ಯಮದಲ್ಲಿ ಹೆಸರುವಾಸಿಯಾಗಿರುವ ಷೆಲ್, ಲಫಾರ್ಜ್ ಸೇರಿ ಪ್ರಮುಖ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಲಿವೆ ಎಂದರು. ಸಭೆಯಲ್ಲಿ ಅನುಮೋದನೆ ಪಡೆದ 38 ಯೋಜನೆಗಳಿಂದ ರಾಜ್ಯದಲ್ಲಿ ಸುಮಾರು 92,350 ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ಯಡಿಯೂರಪ್ಪ ವಿವರಿಸಿದರು.

ಈ ಯೋಜನೆಗಳ ಮುಖ್ಯಸ್ಥರು ಇದೇ ಜೂನ್ ನಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಿದ್ದಾರೆ. ಅನುಮೋದನೆ ಪಡೆದ ಶೇ. 60 ಕ್ಕೂ ಹೆಚ್ಚು ಪ್ರಸ್ತಾವಗಳು ಉತ್ತರ ಕರ್ನಾಟಕಕ್ಕೆ ಸಂಬಂಧಿಸಿವೆ. ಇದರಿಂದ ಶೇ. 70ರಷ್ಟು ಬಂಡವಾಳ ಹೂಡಿಕೆಯಾಗಲಿದೆ ಎಂದು ವಿವರಿಸಿದರು. ಬಾಲಗಕೋಟೆ ಅಥವಾ ಬಳ್ಳಾರಿಯಲ್ಲಿ ಅರ್ಸೆಲರ್ ಮಿತ್ತಲ್ ಕಂಪನಿ ಸ್ಥಾಪನೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X