ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಪ ಹೇಳಬೇಡಿ, ತಪ್ಪದೇ ಬನ್ನಿ :ಮಣಿಕಾಂತ್

By Staff
|
Google Oneindia Kannada News

ಬೆಂಗಳೂರು, ಜ.6: ಅಂದು 'ಅಮ್ಮ ಹೇಳಿದ ಎಂಟು ಸುಳ್ಳು" ಕೃತಿ ಬಿಡುಗಡೆ ಮಾಡುತ್ತಾ ನಟ ಪ್ರಕಾಶ್ ರೈ " ಮಣಿಕಾಂತ್ , ಅಂದ್ರೆ ಯಾರು ಎಂದು ತಿಳಿದಿರಲಿಲ್ಲ. ಗೆಳೆಯ ಸುರೇಶನ ಒತ್ತಾಯಕ್ಕೆ ಮಣಿದು ಬಂದೆ. ಆದ್ರೆ ನಾನು ಬರದೇ ಇದ್ದಿದ್ದರೆ ತುಂಬಾ ಮಿಸ್ ಮಾಡಿಕೊಳ್ತಿದ್ದೆ. ಮಣಿ ಅವರ ಪ್ರೀತಿ, ಅವರ ಪ್ರತಿ ಅಕ್ಷರಗಳಲ್ಲಿ ತುಂಬಿದ್ದಾರೆ. ಇದು ನನ್ನನ್ನು ಕಾಡಿಸಿದೆ. ಅವರ ಬರಹಗಳಲ್ಲಿ ಅವರ ಜೀವನ ಪ್ರೀತಿ ವ್ಯಕ್ತವಾಗುತ್ತಾ ಹೋಗುತ್ತದೆ." ಎಂದರು.

ಇದು ಕೇವಲ ಹೊಗಳಿಕೆಯ ಮಾತಾಗಿರಲಿಲ್ಲ ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ನೆರದಿದ್ದ ಎಲ್ಲರಲ್ಲೂ ಆ ಭಾವ ವ್ಯಕ್ತವಾಗುತ್ತಿತ್ತು ಎಂದರೆ ತಪ್ಪಾಗಲಾರದು. ದಟ್ಸ್ ಕನ್ನಡ.ಕಾಂನ ಅಂಕಣಕಾರ ಮಣಿ ಮತ್ತೊಂದು ಆಹ್ವಾನ ಪತ್ರಿಕೆ ಹಿಡಿದು ಬಂದಿದ್ದಾರೆ. ಪ್ರೀತಿಯಿಂದ ಎಲ್ಲರನ್ನು ಆಹ್ವಾನಿಸುತ್ತಿದ್ದಾರೆ. ಈ ಬಾರಿಯ ವಿಶೇಷವೆಂದರೆ, ಪುಸ್ತಕ ಅನಾವರಣದ ಜೊತೆಗೆ ಸೊಗಸಾದ ಹಾಡುಗಳ ಮೇಳ ನಿಮ್ಮ ಕಿವಿಗಳನ್ನು ಇಂಪಾಗಿಸದೇ ಬಿಡದು. ಕಾರ್ಯಕ್ರಮದ ಆಯೋಜನೆ, ವ್ಯವಸ್ಥಾಪನೆಯನ್ನು ಎಚ್ ಎ ಎಲ್ ನ ಕರ್ನಾಟಕ ಕಲಾಸಂಘದವರು ವಹಿಸಿಕೊಂಡಿದ್ದಾರೆ.

ಉಳಿದ ವಿವರಗಳು ಇಂತಿವೆ:
ಪುಸ್ತಕ: ಹಾಡು ಹುಟ್ಟಿದ ಸಮಯ ( ಚಿತ್ರಗೀತೆ ಹುಟ್ಟು, ಬೆಳವಣಿಗೆ ಹಿನ್ನೆಲೆಯ ಕಥೆಯಾಧಾರಿತ)
ಲೇಖಕ: ಎ.ಆರ್ .ಮಣಿಕಾಂತ್, ಹಿರಿಯ ಉಪ ಸಂಪಾದಕರು, ವಿಜಯ ಕರ್ನಾಟಕ
ಪುಸ್ತಕ ಲೋಕಾರ್ಪಣೆ: ರಮೇಶ್ ಅರವಿಂದ್, ನಟ ಹಾಗೂ ನಿರ್ದೇಶಕ
ಅಧ್ಯಕ್ಷತೆ: ವಿಶ್ವೇಶ್ವರ ಭಟ್, ಸಂಪಾದಕರು, ವಿಜಯ ಕರ್ನಾಟಕ
ಪುಸ್ತಕ ಕುರಿತು : ಅನಂತ ಚಿನಿವಾರ್, ಲೇಖಕರು
ಉಪಸ್ಥಿತಿ: ಕೆಸಿ ರಾಮಲಿಂಗ, ಎಂ ಜಯರಾಮಯ್ಯ, ಕರ್ನಾಟಕ ಕಲಾ ಸಂಘ

ಸ್ಥಳ:
ರವೀಂದ್ರ ಕಲಾಕ್ಷೇತ್ರ
ಸಮಯ: ಬೆಳಗ್ಗೆ 10.30
ದಿನಾಂಕ/ದಿನ: ಭಾನುವಾರ,10.01.2010

ಹಾಡು ಹಬ್ಬದಲ್ಲಿ ಹಾಡುವ ಗಾಯಕ/ಕಿಯರು:
ಕಸ್ತೂರಿ ಶಂಕರ್, ಅರ್ಚನಾ ಉಡುಪ, ಸುಂದರ್, 'ಜೋಗಿ' ಸುನೀತಾ, ಜಯಪಾಲ್, ಪಂಚಮ್ ಹಳಿಬಂಡಿ, ಮಂಗಳಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X