ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಪಿ ಹುದ್ದೆಗೆ ಅಮರ್ ಸಿಂಗ್ ರಾಜೀನಾಮೆ

By Staff
|
Google Oneindia Kannada News

Amar singh
ನವದೆಹಲಿ, ಜ. 6 : ಅನಾರೋಗ್ಯದಿಂದ ಬಳಲುತ್ತಿರುವ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಮರಸಿಂಗ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ಅವರು ಹೊಂದಿದ್ದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆ. ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಉಂಟಾಗಿರುವ ಮನಸ್ತಾಪ ಸಿಂಗ್ ರಾಜೀನಾಮೆ ನೀಡಲು ಕಾರಣ ಎಂದು ಮೂಲಗಳು ತಿಳಿಸಿವೆ.

ನನ್ನ ರಾಜೀನಾಮೆ ಪತ್ರವನ್ನು ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರಿಗೆ ಫ್ಯಾಕ್ಸ್ ಮೂಲಕ ಕಳುಹಿಸಿಕೊಟ್ಟಿರುವೆ. ನಾನು ಹೊಂದಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ, ವಕ್ತಾರ ಹಾಗೂ ಸಂಸದೀಯ ಸಮಿತಿಯ ಸದಸ್ಯತ್ವ ಸ್ಥಾನ ರಾಜೀನಾಮೆ ನೀಡಿರುವುದಾಗಿ ದೂರವಾಣಿ ಮೂಲಕ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಅವರು ದುಬೈ ಪ್ರವಾಸದಲ್ಲಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮುಲಾಮ್ ಸಿಂಗ್ ಯಾದವ್ ಅವರ ಸ್ವಕ್ಷೇತ್ರ ಫಿರೋಜಾಬಾದ್ ನಲ್ಲಿ ಲೋಕಸಭೆಗೆ ಉಪಚುನಾವಣೆ ನಡೆಯಿತು. ಆ ಕ್ಷೇತ್ರದಲ್ಲಿ ಮುಲಾಯಂ ಸಿಂಗ್ ಯಾದವ್ ಸೊಸೆ ಡಿಂಪಲ್ ಯಾದವ್ ಅವರು ಫಿರೋಜಾಬಾದ್ ಕ್ಷೇತ್ರದಿಂದ ಎಸ್ಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಇವರ ವಿರುದ್ಧ ಬಾಲಿವುಡ್ ಚಿತ್ರನಟ ರಾಜ್ ಬಬ್ಬರ್ ಸ್ಪರ್ಧಿಸಿದ್ದರು. ರಾಹುಲ್ ಗಾಂಧಿ ಪ್ರಭಾವದಿಂದ ಎಸ್ಪಿ ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು.

ಇದಕ್ಕೆ ಅಮರಸಿಂಗ್ ಅವರು ಯಾದವ್ ಕುಟುಂಬದ ಅತಿಯಾದ ಆತ್ಮವಿಶ್ವಾಸದಿಂದ ಪಕ್ಷ ಸೋಲುವಂತಾಯಿತು ಎಂದು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರನ್ನು ತೀಕ್ಷ್ಣವಾಗಿ ಟೀಕಿಸಿದ್ದರು. ಇದು ಈ ಇಬ್ಬರು ನಾಯಕರಲ್ಲಿ ಮನಸ್ತಾಪ ಉಂಟಾಗಲು ಕಾರಣವಾಗಿತ್ತು. ಅಮರ್ ಸಿಂಗ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X