ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.5 ರಿಂದ 8ರ ವರೆಗೆ ಮಕ್ಕಳ ಗಣತಿ ಶುರು

By Staff
|
Google Oneindia Kannada News

Sarva Shiksha Abhiyan to conduct children census
ಬೆಂಗಳೂರು, ಜ. 5 : ಸರ್ವ ಶಿಕ್ಷಣ ಅಭಿಯಾನದಡಿ ಸಮಗ್ರ ಮಕ್ಕಳ ಗಣತಿ 2010 ಈ ತಿಂಗಳ 5 ರಿಂದ 8ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಮೂಲಭೂತ ಹಕ್ಕಾಗಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 18 ವರ್ಷದೊಳಗಿನ ಎಲ್ಲ ಮಕ್ಕಳ ಗಣತಿ ನಡೆಸಲು ತೀರ್ಮಾನಿಸಲಾಗಿದೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯ ಸಹಭಾಗಿತ್ವದಲ್ಲಿ ಗಣತಿ ಕಾರ್ಯ ನಡೆಯಲಿದೆ. ಶಾಲಾ ವಯಸ್ಸಿನ ಎಲ್ಲ ಮಕ್ಕಳನ್ನು ಗುರುತಿಸಿ ಶಾಲೆಗೆ ದಾಖಲಿಸಿಕೊಳ್ಳಲು ಹಾಗೂ 4 ರಿಂದ 5 ವಯೋಮಾನದ ಮಕ್ಕಳ ನಿಖರ ಮಾಹಿತಿ ಹಾಗೂ 2010-11 ನೇ ಸಾಲಿನಲ್ಲಿ ಶಾಲಾ ಪೂರ್ವ ಶಿಕ್ಷಣ ಮತ್ತು ಶಾಲೆಗೆ ಸೇರಲಿರುವ ಮಕ್ಕಳ ಮಾಹಿತಿ ಪಡೆಯಲು ಈ ಗಣತಿ ನಡೆಯುತ್ತಿದೆ.

ಈ ಗಣತಿ ಕಾರ್ಯದಿಂದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಖಚಿತ ಮಾಹಿತಿ ಲಭ್ಯವಾಗುವುದರ ಜೊತೆಗೆ ಮಕ್ಕಳ ಕುಟುಂಬದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಮಾಹಿತಿಯೂ ಸಿಗಲಿದೆ. ರಾಜ್ಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಬೋಧಕರು ಈ ಗಣತಿ ಕಾರ್ಯದಲ್ಲಿ ತೊಡಗಲಿದ್ದು, ಗಣಿ ಪ್ರದೇಶ, ಹೋಟೆಲ್, ಕೈಗಾರಿಕಾ ಪ್ರದೇಶ, ಕೊಳಚೆ ಪ್ರದೇಶ ಹಾಗೂ ಬೀದಿ ಮಕ್ಕಳನ್ನು ಗುರುತಿಸಿ ಗಣತಿ ಮಾಡಲು ಸೂಚಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X