ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ನಂತರ ಸಂಪುಟ ಸರ್ಜರಿ: ಸಿಎಂ

By Staff
|
Google Oneindia Kannada News

CM dangles cabinet revamp carrot
ಬೆಂಗಳೂರು, ಜ. 5 : ಸಂಪುಟ ಪುನಾರಚನೆ, ನಿಗಮ ಮಂಡಳಿ ಅಧ್ಯಕ್ಷರ ಮರುನೇಮಕ, ವರ್ಗಾವಣೆ ಸೇರಿದಂತೆ ಶಾಸಕರ ಕ್ಷೇತ್ರದಲ್ಲಿ ಹಸ್ತಕ್ಷೇಪ ನಿಲ್ಲಬೇಕು, ಕೋರ್ ಕಮೀಟಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಬೇಕು. ಇವು ನಗರದ ಹೊರವಲಯ ಗೋಲ್ಡನ್ ಪಾಮ್ಸ್ ರೆಸಾರ್ಟ್ ನಲ್ಲಿ ಸೋಮವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಬಂದ ವಿಷಯಗಳು.

ಭಿನ್ನಮತ ಶಮನಗೊಳಿಸಲು ಈ ಸಭೆ ಕರೆಯಲಾಗಿತ್ತು. ಇಡೀ ದಿನ ನಡೆದ ಸಭೆಯಲ್ಲಿ ಶಾಸಕರು ಮುಕ್ತವಾಗಿ ಮಾತನಾಡಲು ಅವಕಾಶ ಮಾಡಿಕೊಡಲಾಗಿತ್ತು. ಅತೃಪ್ತ ಶಾಸಕರೂ ತಮ್ಮಲ್ಲಿ ಮಡುಗಟ್ಟಿದ್ದ ಕೋಪ ತಾಪವನ್ನು ಹೊರಹಾಕಿದರು. ಕೆಲವರು ಮನಬಂದಂತೆ ಬ್ಯಾಟ್ ಬೀಸಿದರೆ, ಇನ್ನು ಕೆಲವರು ಸಿಕ್ಸರ್ ಬೌಂಡರಿಗಳ ಸುರಿಮಳೆಗರೆದರು.

ಸರಕಾರ ವಿಘ್ನಗಳಿಲ್ಲದೆ ಅವಧಿ ಪೂರ್ಣಗೊಳಿಸಬೇಕಾದರೆ ಕ್ಯಾಬಿನೆಟ್ ಹಾಗೂ ಸರಕಾರದಲ್ಲಿ ಹಲವು ಸುಧಾರಣೆ ಆಗಲೇಬೇಕು. ತಕ್ಷಣವೇ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಬೇಕು. ಕನಿಷ್ಠ ಹತ್ತು ಮಂದಿ ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕರಾದ ಎಸ್ ಕೆ ಬೆಳ್ಳುಬ್ಬಿ, ಕಳಕಪ್ಪ ಬಂಡಿ, ನರಸಿಂಹ ನಾಯಕ, ಸಿಟಿ ರವಿ, ಚಿಕ್ಕನಗೌಡರ್ ಮತ್ತಿತರರು ಆಗ್ರಹಿಸಿದರು. ಯಡಿಯೂರಪ್ಪ ಶಾಂತ ಚಿತ್ತವಾಗಿ ಆಲಿಸಿದರು. ಶಾಸಕರು ಆಕ್ಷೇಪಿಸಿದ ವಿಷಯಗಳ ಮರುಮಾತನಾಡಲಿಲ್ಲ ಮತ್ತು ಸಿಡುಕಲಿಲ್ಲ ಎನ್ನುವುದು ವಿಶೇಷ. ನಂತರ ಮಾತನಾಡಿದ ಯಡಿಯೂರಪ್ಪ, ಬಜೆಟ್ ನಂತರ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದರು. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಭರವಸೆ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X