ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ಕಾವೇರಿ ನೀರು ಇನ್ನಷ್ಟು ದುಬಾರಿ

By Staff
|
Google Oneindia Kannada News

BWSSB may be hike water tariff
ಬೆಂಗಳೂರು, ಜ. 5 : ಪ್ರಸ್ತುತ ಪ್ರತಿ ತಿಂಗಳಿಗೆ ಮೂರು ಕೋಟಿಗಳ ನಷ್ಟ ಭರಿಸುತ್ತಿರುವ ಬೆಂಗಳೂರು ಜಲಮಂಡಳಿ ಶೇ. 11 ರಷ್ಟು ನೀರಿನ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆ ಹಿನ್ನೆಲೆಯಲ್ಲಿ ನೀರಿನ ದರ ಹೆಚ್ಚಿಸುವ ಅನಿವಾರ್ಯತೆಯಿಂದಾಗಿ ಮಂಡಳಿ ದರ ಹೆಚ್ಚಳದ ಕಡೆಗೆ ಗಮನ ಹರಿಸಿದೆ.

ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವುದರಿಂದ ಸಾರ್ವಜನಿಕರ ಕಡೆಯಿಂದ ದೂರುಗಳು ಹೆಚ್ಚಾಗಿರುತ್ತವೆ. ಅಂತಹ ಸಂದರ್ಭದಲ್ಲಿ ನೀರಿನ ದರ ಹೆಚ್ಚಿಸಿದರೆ ಜನರಿಂದ ಮತ್ತಷ್ಟು ಆಕ್ರೋಶ ವ್ಯಕ್ತವಾಗುತ್ತದೆ. ಹೀಗಾಗಿ ಬೇಸಿಗೆಗೆ ಮುನ್ನವೇ ದರ ಹೆಚ್ಚಿಸುವುದು ಸೂಕ್ತ ಎಂಬ ಅಭಿಪ್ರಾಯ ಮಂಡಳಿಯದಾಗಿದೆ. ಪ್ರಸ್ತುತ ಗೃಹ ಬಳಕೆ ನೀರಿನ ದರವು 8 ಸಾವಿರ ಲೀಟರ್ ವರೆಗೆ ಪ್ರತಿ ಕಿಲೋಮೀಟರ್ ಗೆ 6 ರುಪಾಯಿಯಂತೆ 48 ರುಪಾಯಿ ಕನಿಷ್ಠ ಶುಲ್ಕ ವಿಧಿಸಲಾಗುತ್ತದೆ. 8 ರಿಂದ 25 ಸಾವಿರ ಲೀಟರ್ ವರೆಗೆ 201 ರುಪಾಯಿ, 25 ರಿಂದ 50 ಸಾವಿರ ಲೀಟರ್ ಗೆ 676 ರುಪಾಯಿ, 50 ರಿಂದ 75 ಸಾವಿರ ಲೀಟರ್ ವರೆಗೆ 1326 ರುಪಾಯಿವರೆಗೆ, 75 ಸಾವಿರ ಲೀಟರ್ ನಂತರ ಪ್ರತಿ ಕಿಲೋಮೀಟರ್ ಗೆ 36 ರುಪಾಯಿ ವಿಧಿಸಲಾಗುತ್ತದೆ.

ಗೃಹೇತರ ಬಳಕೆಯ ನೀರಿನ ದರವು 10 ಸಾವಿರ ಲೀಟರ್ ವರೆಗೆ 360 ರುಪಾಯಿ, 10 ರಿಂದ 20 ಸಾವಿರ ಲೀಟರ್ ಗೆ 880 ರುಪಾಯಿ, 40 ರಿಂದ 80 60 ಸಾವಿರ ಲೀಟರ್ ನಂತರ ಪ್ರತಿ ಕಿಲೋ ಲೀಟರ್ ಗೆ 52 ರುಪಾಯಿ ದರ ವಿಧಿಸಲಾಗುತ್ತಿದೆ. ಈ ಹಿಂದೆ 2005 ಫೆಬ್ರವರಿ 2 ರಂದು ನೀರಿನ ದಜರ ಹೆಚ್ಚಿಸಲಾಗಿತ್ತು. ಆ ನಂತರ ಎರಡು ಬಾರಿ ವಿದ್ಯುತ್ ದರ ಏರಿಕೆಯಾದರೂ ನೀರಿನ ದರ ಹೆಚ್ಚಿಸಿರಲಿಲ್ಲ ಹೀಗಾಗಿ ಈ ಬಾರಿ ನೀರಿನ ದರ ಹೆಚ್ಚಿಸುವುದು ಅನಿವಾರ್ಯ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X