ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಘನ ಸರಕಾರದಿಂದ ರೈತರಿಗೆ ಮಹಾಮೋಸ

By Staff
|
Google Oneindia Kannada News

Yeddyurappa
ಬೆಂಗಳೂರು, ಡಿ. 31 : ಹೊಸ ವರುಷದ ಮುನ್ನಾ ದಿನ ರಾಜ್ಯದ ನಾಲ್ಕು ಕೋಟಿ ರೈತ ಸಮುದಾಯಕ್ಕೆ ಘನತೆವೆತ್ತ ಸರಕಾರ ಕೊಳ್ಳೆ ಇಟ್ಟಿದೆ. ರೈತರ ಸಾಲ ಮನ್ನಾ ಮಾಡುವುದು ಅಸಾಧ್ಯ ಎಂದು ಹೇಳುವ ಮೂಲಕ ಮಾತಿಗೆ ತಪ್ಪಿ ರೈತರಿಗೆ ಮಹಾಮೋಸ ಎಸಗಿದೆ. ಇತ್ತೀಚೆಗೆ ರೈತರ ಮೇಲೆ ಪದೆಪದೇ ಲಾಠಿ ಏಟು ನೀಡಿದ್ದ ಸರಕಾರ, ಇಂದು ಆತನ ಹೊಟ್ಟೆಗೆ ಹೊಡೆಯುವ ಕೃತ್ಯ ಮಾಡಿದೆ. ಮತಕ್ಕಾಗಿ ನಾಟಕವಾಡಿದೆ ಎಂಬ ಹೇಳಿಕೆಯನ್ನು ಬೇರೆ ನೀಡಿದ್ದು ನಾಡಿನ ರೈತರ ದೌರ್ಭಾಗ್ಯವೇ ಸರಿ. ರೈತರ ಶಾಪ ಮಾತ್ರ ಈ ಸರಕಾರಕ್ಕೆ ತಟ್ಟದೆ ಇರದು.

ವಿಧಾನ ಪರಿಷತ್ ನಲ್ಲಿ ಇಂದು ನಿಯಮ 68 ರ ಅಡಿಯಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಅವರು ನೆರೆ ಹಾವಳಿ ಗೆ ಸಂಬಂಧಿಸಿದಂತೆ ಮಾತನಾಡಿ, ರೈತರ ಸಾಲ ಮಾಡಲು ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಭಾಷಣ ಮಾಡುವ ಹಾಗೆ ನಾನು ಕೂಡಾ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ. ಅದು ಮತ ಗಿಟ್ಟಿಸಿಕೊಳ್ಳುವ ತಂತ್ರ ಮಾತ್ರ. ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಘನ ಸರಕಾರದ ಮುಖ್ಯಮಂತ್ರಿ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರ ಸ್ಪಷ್ಟ ನುಡಿಯಿದೆ ?

ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ. ತೆರಿಗೆ ಸಂಗ್ರಹದಲ್ಲಿ ವಿಫಲವಾಗಿದ್ದು, ಸಾಲ ಮನ್ನಾ ಅಸಾಧ್ಯ ಎಂದು ಮತ್ತೊಮ್ಮೆ ಹೇಳಿದರು. ಸರಕಾರದ ಈ ಕ್ರಮ ಪ್ರತಿಪಕ್ಷಗಳಿಗೆ ದಾಳಿವಾಗಿದ್ದು, ಪ್ರತಿಪಕ್ಷಗಳ ನಾಯಕರಾದ ಸಿದ್ಧರಾಮಯ್ಯ, ವಿ ಎಸ್ ಉಗ್ರಪ್ಪ, ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X