ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್‌ಬಾಗ್‌ನಲ್ಲಿ ಜ. 2ರಿಂದ 'ಕಿತ್ತಳೆ ಹಬ್ಬ'

By Staff
|
Google Oneindia Kannada News

Lalbagh , Bengaluru
ಬೆಂಗಳೂರು, ಡಿ29: ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ, ಲಾಲ್‌ಬಾಗ್, ಬೆಂಗಳೂರು ರವರ ಸಹಭಾಗಿತ್ವದಲ್ಲಿ ಜನವರಿ 2 ರಿಂದ 5, 2010 ರವರೆಗೆ, ಲಾಲ್‌ಬಾಗ್, ಬೆಂಗಳೂರಿನಲ್ಲಿ 3ನೇ ಅಂತರರಾಜ್ಯ Horti- Fair Sangam 2009 (orange Festival) ಕಿತ್ತಳೆ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಮೇಳದಲ್ಲಿ ಮಹಾರಾಷ್ಟ್ರ,ಆಂಧ್ರಪ್ರದೇಶ, ಕರ್ನಾಟಕ, ಪಂಜಾಬ್, ರಾಜಸ್ಥಾನ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಿತ್ತಳೆ ಜಾತಿಯ ಹಣ್ಣುಗಳನ್ನು ಮುಖ್ಯವಾಗಿ ಕಿತ್ತಳೆ, ಮೂಸಂಬಿ, ಕಿನೊ ಮತ್ತು ನಿಂಬೆ ಗಳನ್ನು ಬೆಳೆಯುವ ರೈತರುಗಳನ್ನು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಸಲು ಹಾಗೂ ಮಾರಾಟ ಮಾಡಲು ಆಹ್ವಾನಿಸಿದೆ. ಈ ರೈತರುಗಳಿಗೆ ಅವರು ಬೆಳೆಯುವ ಬೆಳೆಗಳಿಗೆ ಅನುಸಾರವಾಗಿ ಕೊಯ್ಲು, ವಿಂಗಡನೆ, ಪ್ಯಾಕಿಂಗ್, ಮಾರುಕಟ್ಟೆಯನ್ನೊಳಗೊಂಡ ಕೊಯ್ಲೋತ್ತರ ನಿರ್ವಹಣೆಯಲ್ಲಿನ ನೂತನ ತಂತ್ರಜ್ಞಾನಗಳ ಕುರಿತು ಈ ಸಂದರ್ಭದಲ್ಲಿ ಅರಿವು ಮೂಡಿಸಲಾಗುವುದು.

ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಿ ಹೆಚ್ಚು ಲಾಭಗಳಿಸುವಂತೆ ಮಾಡುವುದು ಹಾಗೂ ತೋಟಗಾರಿಕೆ ಉತ್ಪಾದಕರು, ಮಾರುಕಟ್ಟೆದಾರರು ಮತ್ತು ಬಳಕೆದಾರರ ನಡುವಿನ ಕೊಂಡಿಯನ್ನು ಬಲಪಡಿಸುವುದು ಈ ಮೇಳದ ಉದ್ದೇಶವಾಗಿರುತ್ತದೆ.ಈ ಪ್ರದರ್ಶನಕ್ಕೆ ಪ್ರತ್ಯೇಕ ಪ್ರವೇಶ ಶುಲ್ಕವಿರುವುದಿಲ್ಲ. ವಾಡಿಕೆಯ ಗೇಟು ಶುಲ್ಕವನ್ನು ತೆತ್ತು ಲಾಲ್‌ಬಾಗ್ ಪ್ರವೇಶಿಸಿ ಈ ಮೇಳವನ್ನು ನೋಡಿ, ಹಣ್ಣುಗಳನ್ನು ಖರೀದಿಸಿ, ಸಂತೋಷಿಸಲು ಇದೊಂದು ಅಪೂರ್ವ ಅವಕಾಶವಾಗಿದೆ.

Horti Sangam 2009 ಪ್ರಮುಖ ಆಕರ್ಷಣೆಗಳು:

*ಈ ಮೇಳದಲ್ಲಿ ಕಿತ್ತಳೆ, ವಿವಿಧ ತಾಜಾ ಹಣ್ಣು, ತರಕಾರಿಗಳು, ಒಣಹಣ್ಣುಗಳು, ಇತ್ಯಾದಿಗಳನ್ನೊಳಗೊಂಡ 46 ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು.
*ಈ ಮೇಳದಲ್ಲಿ ಭಾಗವಹಿಸುವ ರೈತರಿಗೆ ಹಾಗೂ ಇತರರಿಗೆ ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ ಹಾಗೂ ವಿವಿಧ ಸಂಸ್ಥೆಗಳ 6 ವಿಶೇಷ ಮಳಿಗೆಗಳಿರುತ್ತವೆ
*ಈ ಮೇಳವನ್ನು ಬಿಂಬಿಸುವ ಹಾಗೂ ಉದ್ದೇಶವನ್ನು ಸಾರುವ ಒಂದು ಪ್ರತ್ಯೇಕ ಮಳಿಗೆಯಿರುತ್ತದೆ.
* ನಾಗಪುರ ಕಿತ್ತಳೆ, ಕಿನೋ ಕಿತ್ತಳೆ, ಕೊಡಗು ಕಿತ್ತಳೆ, ನಿಂಬೆ, ಇತ್ಯಾದಿಗಳ ಕುರಿತು ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ ಹಾಗೂ ಮಾರುಕಟ್ಟೆಯ ಬಗ್ಗೆ ರೈತರಿಗೆ ಅರಿವು ಮೂಡಿಸಲು ಎರಡು ದಿನಗಳ ಕಾಲ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ಈ ಮೇಳದಲ್ಲಿ ದೇಶದ ವಿವಿಧ ಭಾಗಗಳಲ್ಲಿನ ವಿಶಿಷ್ಟ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನವನ್ನು ಒಂದೇ ಸೂರಿನಡಿ (ಗಾಜಿನ ಮನೆ, ಲಾಲ್‌ಬಾಗ್, ಬೆಂಗಳೂರು) ಏರ್ಪಡಿಸಲಾಗಿದೆ. ಅಂದರೆ, ಈಶಾನ್ಯ ಭಾಗದ ಕಾಶೀ ಕಿತ್ತಳೆ, ಸಿಕ್ಕಿಂ ಕಿತ್ತಳೆ, ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ರಾಜ್ಯಗಳ ಕಿನೋ ಕಿತ್ತಳೆ, ಕರ್ನಾಟಕ ರಾಜ್ಯದ ಕೊಡಗು ಕಿತ್ತಳೆ ಮತ್ತು ಮಹರಾಷ್ಟ್ರ ರಾಜ್ಯದ ನಾಗಪುರ ಕಿತ್ತಳೆ, ನಿಂಬೆ, ಮೂಸಂಬಿ, ಚಕ್ಕೋತಗಳನ್ನು ಪ್ರದರ್ಶಿಸಲಾಗುವುದು.

ದೇಶದ ರೈತರುಗಳಿಗೆ ತೋಟಗಾರಿಕೆ ಉತ್ಪನ್ನಗಳ ನಿರ್ವಹಣೆ ಕುರಿತು ನೂತನ ತಂತ್ರಜ್ಞಾನಗಳ ಬಗ್ಗೆ ತಿಳಿಸಲು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ಶ್ರಮಿಸುತ್ತಿದೆ. ಇದರಿಂದ ರೈತರು ತಾವು ಉತ್ಪಾದಿಸಿದ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಅವಕಾಶವಿರುತ್ತದೆ. ಇದರಿಂದ ರೈತರುಗಳು ಹೊಸಬಗೆಯ ಪ್ಯಾಕಿಂಗ್, ವಸ್ತುಗಳ ಬಗ್ಗೆ ಅರಿವನ್ನು ಪಡೆದುಕೊಂಡು, ದೂರದ ಊರುಗಳಿಗೆ ತಮ್ಮ ಕಿತ್ತಳೆ ಜಾತಿಯ ಉತ್ಪನ್ನಗಳನ್ನು ಸಾಗಾಣಿಕೆ ಮಾಡಿ, ಮಾರಾಟ ಮಾಡುವ ಬಗ್ಗೆ ತಿಳಿವಳಿಕೆಯನ್ನು ಪಡೆಯಬಹುದಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X