ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕ್ಲಬ್ಬಿಗೆ ಚರ್ಚಿಲ್ ಬಾಕಿ ಎಷ್ಟು ಗೊತ್ತೆ?

By Staff
|
Google Oneindia Kannada News

Churchill's unpaid India bill on show
ಬೆಂಗಳೂರು, ಡಿ. 25 : ನಮ್ಮ ಜನಪ್ರತಿನಿಧಿಗಳು ಸರಕಾರಿ ಸವಲತ್ತನ್ನು ಬೇಕಾಬಿಟ್ಟಿ ಬಳಸಿ ಬಿಲ್ ಕಟ್ಟುವ ಸಮಯದಲ್ಲಿ ನೆನಪಿನ ಶಕ್ತಿ ಕಳೆದುಕೊಂಡು ಬಿಟ್ಟಿರುತ್ತಾರೆ. ನಮ್ಮ ಭೂಮಿಯ ಮೇಲಿರುವ ತಾರೆಯರು ಸರಕಾರಕ್ಕೆ ಸಂದಾಯವಾಗಬೇಕಾಗಿರುವ ತೆರಿಗೆಯನ್ನು ಕೋಟಿಗಟ್ಟಲೆ ಬಾಕಿ ಉಳಿಸಿಕೊಂಡು ಸುದ್ದಿಗೆ ಗ್ರಾಸವಾಗಿರುತ್ತಾರೆ. ಸರಕಾರಿ ಅಧಿಕಾರಿಗಳು, ಕಾಂಟ್ರಾಕ್ಟರುಗಳು ಮಾಡಿದ ನಯಾಪೈಸೆ ಕೆಲಸಕ್ಕೆ ಕೋಟಿಗಟ್ಟಲೆ ಬಿಲ್ಲು ತೋರಿಸಿ ಬಂಗಲೆ ಮೇಲೆ ಬಂಗಲೆ ಎಬ್ಬಿಸಿರುತ್ತಾರೆ.

ಆದರೆ, ಇಂಥ ಘಟನೆಗಳು ಪ್ರತಿದಿನ ಜರುಗುವುದರಿಂದ ಇವಾವುವೂ ಸುದ್ದಿ ಎನ್ನಿಸುವುದೇ ಇಲ್ಲ. ಇನ್ನು ಯಕಃಶ್ಚಿತ್ 13 ರು. ಬಾಕಿ ಉಳಿಸಿಕೊಂಡಿದ್ದರೆ ಸುದ್ದಿಯಾಗಲು ಸಾಧ್ಯವೆ? ಖಂಡಿತ ಸಾಧ್ಯ. ಆ ಬಾಕಿಯನ್ನು ಉಳಿಸಿಕೊಂಡಿರುವವರು ಬೇರೆ ಯಾರೂ ಅಲ್ಲ ಪ್ರಸಿದ್ಧ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದ ಬ್ರಿಟನ್ನಿನ ಮಾಜಿ ಪ್ರಧಾನಿ ಲೆಫ್ಟಿನಂಟ್ ವಿನ್ ಸ್ಟನ್ ಚರ್ಚಿಲ್! ನೀಡಬೇಕಾಗಿದ್ದುದು ಬೆಂಗಳೂರಿನಲ್ಲಿ ಬೆಂಗಳೂರು ಕ್ಲಬ್ಬಿಗೆ, 1897ರಲ್ಲಿ.

ಬ್ರಿಟಿಷ್ ಅಧಿಕಾರಿಗಳಿಂದಲೇ 1868ರಲ್ಲಿ ಸ್ಥಾಪಿತವಾಗಿರುವ ಬೆಂಗಳೂರು ಕ್ಲಬ್ಬಿಗೆ ಚರ್ಚಿಲ್ ಯುವ ಮಿಲಿಟರಿ ಅಧಿಕಾರಿಯಾಗಿ 1896ರಲ್ಲಿ ಬಂದಿದ್ದರು. ಮೂರು ವರ್ಷ ಇಲ್ಲಿದ್ದು ಈಗಿನ ಪಾಕಿಸ್ತಾನ ಪ್ರಾಂತ್ಯಕ್ಕೆ ಯುದ್ಧಕ್ಕೆಂದು ತೆರಳುವ ಮುನ್ನ ಕ್ಲಬ್ಬಿನಲ್ಲಿ ಹದಿಮೂರು ರು. ಉಳಿಸಿ ಹೋಗಿದ್ದರು. ಅದು, ಅತಿ ಪುರಾತನ ಕ್ಲಬ್ಬಿನ ಲೆಡ್ಜರಿನಲ್ಲಿ ದಾಖಲಾಗಿ ಉಳಿದಿದೆ.

ಕ್ಲಬ್ಬಿನ ಬಾಕಿ ಚುಕ್ತಾ ಮಾಡದೆ ಉಳಿಸಿರುವ ಚರ್ಚಿಲ್ ಅವರ ಅಂದಿನ ಭಾವಚಿತ್ರವನ್ನು ಅಚ್ಚುಕಟ್ಟಾಗಿ ಕಟ್ಟುಹಾಕಿಸಿ ಬೆಂಗಳೂರು ಕ್ಲಬ್ ತನ್ನ ಆವರಣದಲ್ಲಿ ತೂಗುಹಾಕಿದೆ. ಜೂನ್ 1, 1899ರ ದಾಖಲಾತಿಯಲ್ಲಿ ಬಾಕಿ ನಮೂದಿತವಾಗಿದೆ. ಈ ಬಾಕಿಯನ್ನು ತೀರಿಸಲು ಅನೇಕ ಅತಿಥಿ ಬ್ರಿಟಿಷರು ಮುಂದೆ ಬಂದಿದ್ದರೂ ಕ್ಲಬ್ ತನ್ನ ಇತಿಹಾಸದ ಪುಟಗಳಲ್ಲಿ ಇನ್ನೂ ಹಾಗೆಯೇ ಉಳಿಸಿಕೊಂಡಿದೆ. ಇತಿಹಾಸ ಇತಿಹಾಸವೆ. ಅದನ್ನು ಮರುನಿರ್ಮಿಸುವುದು ಸಾಧ್ಯವಿಲ್ಲ ಅಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X