ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಣುಕಾಚಾರ್ಯ ಬಾಯಿಗೆ ಬ್ಯಾಂಡೇಜ್

By Staff
|
Google Oneindia Kannada News

Renukacharya
ಬೆಂಗಳೂರು, ಡಿ. 24 : ಬೆಂಗಳೂರು ನಗರದ ಬಿಜೆಪಿ ಶಾಸಕರು, ಪಕ್ಷದ ಅಧ್ಯಕ್ಷ ಡಿ ವಿ ಸದಾನಂದಗೌಡ, ಸಂಸದ ಅನಂತ್ ಕುಮಾರ್ ಮತ್ತಿತರ ಬಿಜೆಪಿ ಧುರೀಣರ ಅನುಮಾನಾಸ್ಪದ ಗೈರು ಹಾಜರಿಯಲ್ಲಿ ರೆಬೆಲ್ ಸ್ಟಾರ್ ರೇಣುಕಾಚಾರ್ಯ ಇಂದು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಛಲ ಸಾಧಿಸಿದ ರೇಣುಕಾಗೆ ಅಂತೂ ಅಧಿಕಾರ ಲಕ್ಷ್ಮಿ ಒಲಿದುಬಂದಳು. ಇದರೊಂದಿಗೆ ಆಡಳಿತ ಪಕ್ಷ ಮತ್ತು ಸರಕಾರಕ್ಕೆ ಮಗ್ಗಲು ಮುಳ್ಳಾಗಿದ್ದ ಒಬ್ಬ ಭಿನ್ನಮತೀಯ ಶಾಸಕನ ಬಾಯಿ ಮುಚ್ಚಿಸುವಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಯಶಸ್ವಿಯಾದಂತಾಯಿತು.

ಗುರುವಾರ ಬೆಳಗ್ಗೆ ರಾಜಭವನದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರೇಣುಕಾಚಾರ್ಯ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ ಯಡ್ಡಿ ಮಂತ್ರಿ ಮಂಡಳದ ಸ್ಕೋರು 34 ಕ್ಕೆ ಏರಿತು. ಸಂವಿಧಾನ ವಿಧಿಸಿರುವ ಕಟ್ಟಳೆಯಂತೆ ಮುಖ್ಯಮಂತ್ರಿಯೂ ಸೇರಿದಂತೆ ಸಚಿವ ಸಂಪುಟದಲ್ಲಿ 34ಕ್ಕಿಂತ ಹೆಚ್ಚು ಸದಸ್ಯರು ಇರುವಂತಿಲ್ಲ. ರೇಣುಕಾಚಾರ್ಯ ಅವರು ಶಿವಮೊಗ್ಗ ಜಿಲ್ಲೆ ಹೊನ್ನಾಳಿ ಕ್ಷೇತ್ರವನ್ನು ಎರಡನೇ ಬಾರಿಗೆ ಪ್ರತಿನಿಧಿಸುತ್ತಿರುವ ಶಾಸಕರಾಗಿರುತ್ತಾರೆ.

ಪ್ರಮಾಣ ವಚನ ಸಮಾರಂಭದಲ್ಲಿ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಇಬ್ಬರು ಸಚಿವರುಗಳಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ್ ಬೊಮ್ಮಾಯಿ ಹಾಜರಿದ್ದರು. ರಾಜಭವನದ ಶಿಷ್ಟಾಚಾರದ ಅನ್ವಯ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೊರತು ಪಡಿಸಿದರೆ ಪ್ರಮಾಣ ವಚನಕ್ಕೆ ಸಮಾರಂಭದ ಖಳೆ ಇರಲಿಲ್ಲ. ನೂತನ ಸಚಿವ ರೇಣುಕಾಚಾರ್ಯ ಅವರಿಗೆ ಯಾವ ಖಾತೆ ಕೊಡಲಾಗುವುದು ಎಂಬ ಬಗ್ಗೆ ಯಡ್ಡಿ ಅವರಿಂದ ಸುಳಿವು ದೊರೆತಿಲ್ಲ.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X