ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರುದ್ರಪ್ಪನವರಿಗೆ ಕಾವ್ಯ ತುಲಾಭಾರ

By Staff
|
Google Oneindia Kannada News

GS Shivarudrappa
ಬೆಂಗಳೂರು, ಡಿ. 24 : ರಸಿಕ ಕೇಳೋ ತಂಡವು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಕಾವ್ಯೋತ್ಸವದ 'ಚೈತ್ರೋದಯ' ಕಾರ್ಯಕ್ರಮವನ್ನು ಡಿ. 27ರ ಭಾನುವಾರ ಬೆಳಗ್ಗೆ 10 ಗಂಟೆಗೆ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದೆ.

ಕವಿ ಜಿ ಎಸ್ ಶಿವರುದ್ರಪ್ಪ ಅವರ ಸಮ್ಮುಖದಲ್ಲಿ ಕಾವ್ಯದ ಹಣತೆ ಹಚ್ಚುವ ರಸಿಕರೆಂದರೆ, ಕವಿ ಚೆನ್ನವೀರ ಕಣವಿ, ಜಾನಪದ ಸಾಹಿತಿ ಚಂದ್ರಶೇಖರ ಕಂಬಾರ, ಪಂ ಪರಮೇಶ್ವರ ಹೆಗಡೆ, ನಟ ಸಿ ಆರ್ ಸಿಂಹ, ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಕೆಎನ್ ಶಾಂತಕುಮಾರ್, ಪೊಲೀಸ್ ಮಹಾನಿರ್ದೇಶಕ ಅಜಯಕುಮಾರ್ ಸಿಂಗ್, ನಟಿ ಉಮಾಶ್ರೀ, ಕವಿ ಎಚ್ ಎಸ್ ವೆಂಕಟೇಶಮೂರ್ತಿ, ಸಚಿವ ಸುರೇಶಕುಮಾರ್, ಸಿದ್ಧಲಿಂಗಯ್ಯ, ಕಿರುತೆರೆ ನಿರ್ದೇಶಕ ಬಿ ಸುರೇಶ್, ಮಾಜಿ ಸಚಿವೆ ಬಿಟಿ ಲಲಿತಾ ನಾಯ್ಕ್, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್.

ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ ಭುಜಂಗಶೆಟ್ಟಿ, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಜನಪ್ರಿಯ ಕಿರುತರೆ ನಿರ್ದೇಶಕ ಟಿ ಎನ್ ಸೀತಾರಾಮ್, ಪತ್ರಕರ್ತ ರವಿ ಬೆಳೆಗೆರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಐಎಂ ವಿಠ್ಠಲಮೂರ್ತಿ, ರಂಗಭೂಮಿ ಕಲಾವಿದೆ ಬಿ ಜಯಶ್ರೀ, ಕಥೆಗಾರ ಎಸ್ ದಿವಾಕರ್, ರಂಗಭೂಮಿ ಕಲಾವಿದ ಮಂಡ್ಯ ರಮೇಶ್, ಕ್ಷಣಹೊತ್ತು ಆಣಿಮುತ್ತು ಖ್ಯಾತಿಯ ಎಸ್ ಷಡಕ್ಷರಿ, ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ, ಆಂಜನೇಯ ಜೋಗಿ, ಮನು ಬಳಿಗಾರ್, ಎಸ್ ಆರ್ ರಾಮಕೃಷ್ಣ, ಸುಮಾ ಸುಧೀಂದ್ರ, ಹಾಸ್ಯ ಕಲಾವಿದ ಜಹಾಂಗೀರ್, ಯತಿ ಸಿದ್ಧಕಟ್ಟೆ ಭಾಗವಹಿಸುವರು.

ಕವಿಯ ಸಮ್ಮುಖದಲ್ಲಿ ಅವರ ಕವನ ವಾಚನ, ಅವರ ಕೃತಿಗಳ ಬಗ್ಗೆ ವಿವಿಧ ರಂಗದ ಕಾವ್ಯ ರಸಿಕರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಪತ್ರಕರ್ತ ರವಿ ಬೆಳಗೆರೆಯಿಂದ ಹಿಡಿದು ಐಎಎಸ್ ಆಧಿಕಾರಿಗಳು, ಸಚಿವರುಗಳು ಕೂಡ ತಮ್ಮ ಸಾಹಿತ್ಯ ಅಭಿರುಚಿಯ ಅನಾವರಣ ಮಾಡಲಿದ್ದಾರೆ. ಎಲ್ಲಾ ಕ್ಷೇತ್ರದ ಕಲಾಭಿಮಾನಿಗಳನ್ನು ಒಂದೆಡೆ ಸೇರಿಸಿ ಕವಿಯನ್ನು ಪಕ್ಕದಲ್ಲಿ ಕೂರಿಸಿ, ಅವರ ಮನಸ್ಸಿಗೆ ಅವರದೇ ಸಾಲುಗಳನ್ನು ಕೇಳಿಸುತ್ತಾ, ಕಾವ್ಯಾಧಾರೆಯನ್ನು ಹರಿಸುವ ಈ ಕಾಯಕವನ್ನು 'ರಸಿಕ ಕೇಳೋ' ತಂಡ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದೆ. ಈ ಹಿಂದೆ, ಯವನಿಕಾದಲ್ಲಿ ನಿಸಾರ್ ಅಹಮದ್ ಅವರ ಕಾರ್ಯಕ್ರಮ ಆಯೋಜಿಸಿ ರಸಿಕರ ಮನ ತಣಿಸಿದ್ದನ್ನು ಮರೆಯುವಂತಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X