ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು : ಲವ್ ಜಿಹಾದ್ ಬಿಡುಗಡೆ

By Staff
|
Google Oneindia Kannada News

Pramod Mutalik
ಮಂಗಳೂರು, ಡಿ 24 :ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಲವ್ ಜಿಹಾದ್ ವಿರುದ್ಧ ಶ್ರೀರಾಮಸೇನೆ ಹೊರ ತಂದ ಲೇಖನಗಳ ಆಧಾರಿತ "ಹಿಂದೂ ಹುಡುಗಿಯರೇ ಹುಷಾರ್: ಲವ್ ಜಿಹಾದ್" ಹೊತ್ತಿಗೆಯನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು ಲವ್ ಜಿಹಾದ್ ವಿರುದ್ಧ 'ಬೇಟಿ ಬಚಾವೋ ಆಂದೋಲನ' ಆರಂಭಿಸಲಾಗಿದೆ ಎಂದು ಹೇಳಿದರು.

ಲವ್ ಜಿಹಾದ್ ನಿಂದ ನೊಂದಿರುವ ಯುವತಿಯರ ವೀಡಿಯೊ ದಾಖಲಿಸಿ ಸಿಡಿ ತಯಾರಿಸಲಾಗಿದೆ. ಹಿಂದೂ ಭಗಿನಿಯರು ಮತ್ತು ಸಂಸ್ಕೃತಿ ಉಳಿಸಲು ಡಿಸೆಂಬರ್ 20ರಿಂದ ಜನವರಿ 20ರ ವರೆಗೆ ಬೇಟಿ ಬಚಾವೋ ಆಂದೋಲನ ಮಾಡಲಾಗುತ್ತಿದೆ. ಹಜ್ ಯಾತ್ರೆಗೆ ಸರಕಾರ ಧನ ಸಹಾಯ ನೀಡುತ್ತಿದೆ. ಹಿಂದೂಗಳ ಪವಿತ್ರ ಶಬರಿಮಲೆ ಯಾತ್ರೆಗೂ ಸಹಾಯಧನ ನೀಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.

4700 ಹಿಂದೂ ಯುವತಿಯರ ಅಪಹರಣ ಮತ್ತು ನಾಪತ್ತೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಲವ್ ಜಿಹಾದ್ ಜಾಲದಲ್ಲಿ ಸಿಲುಕಿದ ಮೂರು ಸಾವಿರ ಮಂದಿ ಹಿಂದಿರುಗಿ ಬಂದಿದ್ದಾರೆ. 700 ಮಂದಿ ವೇಶ್ಯಾಗೃಹದಲ್ಲಿ ನಲುಗುತ್ತಿದ್ದಾರೆ. 300 ಮಂದಿಗೆ ಮನೆಗೆ ಹೋಗಿದ್ದಾರೆ. ಉಳಿದವರು ಹೋದಲ್ಲಿಯೇ ಉಳಿದುಕೊಂಡುನಿಕೃಷ್ಟ ಬದುಕು ಸಾಗಿಸುತ್ತಿದ್ದಾರೆ ಎಂದು ಮುತಾಲಿಕ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X