• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ-ಲಂಕಾ ಏಕದಿನ ಪಂದ್ಯ 2.30ಕ್ಕೆ ಆರಂಭ

By Staff
|

ಕೊಲ್ಕತ್ತಾ, ಡಿ. 24 : ಟೀಮ್ ಇಂಡಿಯಾ ಹಾಗೂ ಅತಿಥೇಯ ಶ್ರೀಲಂಕಾ ತಂಡಗಳ ನಡುವೆ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ 2.30 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯ ಎರಡು ತಂಡಗಳಿಗೂ ಮಹತ್ವದ್ದಾಗಿದ್ದು, ಈ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ ತನ್ನದಾಗಿಸಿಕೊಳ್ಳಲಿದೆ. ಒಂದು ಮೇಲೆ ಲಂಕನ್ನರು ವಿಜಯಪತಾಕೆ ಹಾರಿಸಿದರೆ, ಸರಣಿ 2-2 ರಲ್ಲಿ ಸಮನಾಗಲಿದ್ದು, ಅಂತಿಮ ಪಂದ್ಯ ತೀವ್ರ ಕುತೂಹಲಕ್ಕೆ ಕೆರಳಿಸಿದೆ.

ವೀರೇಂದ್ರ ಸೆಹವಾಗ್ ನಾಯಕತ್ವದಲ್ಲಿ ಮೈದಾನಕ್ಕಿಳಿಯಲಿರುವ ಭಾರತೀಯ ಸಮರ್ಥವಾಗಿದ್ದರೂ, ಎರಡು ಪಂದ್ಯಗಳಿಗೆ ನಿಷೇಧಕ್ಕೊಳಗಾಗಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಗಾಯಗೊಂಡಿರುವ ತಂಡದಿಂದ ಹೊರಗುಳಿದಿರುವ ಯುವರಾಜ್ ಸಿಂಗ್ ಅನುಪಸ್ಥಿತಿ ತಂಡದ ಸಮತೋಲನದಲ್ಲಿ ಕೊಂಚ ಏರುಪೇರು ಆಗಿರುವುದು ನಿಜವಾಗಿದೆ.

ಮೂರನೇ ಏಕದಿನ ಪಂದ್ಯದ ಗೆಲುವಿನಲ್ಲಿ ಮಹತ್ವ ಪಾತ್ರ ವಹಿಸಿದ್ದ ರವೀಂದ್ರ ಜಡೇಜಾ ಅವರ ಮ್ಯಾಜಿಕ್ ಬೌಲಿಂಗ್ ಮತ್ತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಬ್ಬರ ಈ ಪಂದ್ಯದಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಯುವರಾಜ್ ಸಿಂಗ್ ಸ್ಥಾನವನ್ನು ವಿರಾಟ್ ಕೊಹ್ಲಿ ತುಂಬುವ ಸಾಧ್ಯತೆ ಇದೆ. ನಾಲ್ಕನೇ ಪಂದ್ಯವನ್ನು ಭಾರತ ತನ್ನದಾಗಿಸಿಕೊಳ್ಳಲಿದೆ ಎಂದು ನಾಯಕ ವೀರೇಂದ್ರ ಸೆಹವಾಗ್ ವಿಶ್ವಾಸದಿಂದ ಹೇಳಿದ್ದಾರೆ.

ಅತ್ತ ಲಂಕನ್ನರ ಪರ ಬ್ಯಾಟಿಂಗ್ ಪಡೆ ಭಾರಿ ಸಿದ್ಧತೆಯಲ್ಲಿ ತೊಡಗಿದ್ದು, ತರಂಗ, ದಿಲ್ಶಾನ್, ಸಂಗಕ್ಕಾರ್, ಜಯವರ್ಧನೆ ಅವರು ವೀರೂ ಪಡೆಗೆ ತಿರುಗೇಟು ನೀಡಲು ತುದಿಗಾಲ ಮೇಲೆ ನಿಂತಿದ್ದಾರೆ. ಈಗಾಗಲೇ ಭಾರತ 2-1 ರಿಂದ ಮುಂದಿದೆ. 5ನೇ ಏಕದಿನ ಪಂದ್ಯ ದೆಹಲಿಯ ಪಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿದೆ. ಕ್ಷಣಕ್ಷಣದ ತಾಜಾ ಸುದ್ದಿಗೆ ದಟ್ಸ್ ಕನ್ನಡ ಕ್ರಿಕೆಟ್ ಕಾಮೆಂಟರಿಗೆ ಕ್ಲಿಕ್ಕಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X