ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವಾರ ಯಾಹೂ ಬಾಗಿಲು ಬಂದ್ !

By Staff
|
Google Oneindia Kannada News

Yahoo
ನ್ಯೂಯಾರ್ಕ್, ಡಿ. 23 : ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳುತ್ತಿರುವ ಯಾಹೂ ತನ್ನ ಹಣಕಾಸು ಸ್ಥಿತಿಯನ್ನು ಸರಿದೂಗಿಸಿಕೊಳ್ಳಲು ಇದೇ ಮೊದಲ ಬಾರಿಗೆ ವಿಶ್ವಾದ್ಯಂತ ಒಂದು ವಾರ ಕಾಲ ಕಚೇರಿಗೆ ರಜೆ ಘೋಷಿಸಲು ನಿರ್ಧರಿಸಿದೆ. ಅಂತರ್ಜಾಲ ಕಂಪನಿಯೊಂದು ತನ್ನೆಲ್ಲಾ ಕಚೇರಿಗಳಿಗೆ ಒಂದೇ ವೇಳೆ ರಜೆ ನೀಡುತ್ತಿರುವುದು ಇದೇ ಮೊದಲ ಸಲವಾಗಿದೆ.

ಡಿಸೆಂಬರ್ 25 ರಿಂದ ಜನವರಿ 1 ರವರೆಗೆ ವಿಶ್ವದಾದ್ಯಂತ ರಜೆ ಘೋಷಿಸಿದೆ. ಡಿಸೆಂಬರ್ ಅಂತ್ಯದಲ್ಲಿ ಒಂದು ವಾರ ರಜೆ ನೀಡುವುದು ಸರ್ವೆ ಸಾಮಾನ್ಯವಾದರೂ, ಈ ಭಾರಿ ಯಾಹೂ ವಿಶ್ವದಲ್ಲೆಡೆ ರಜೆ ನೀಡಲು ತೀರ್ಮಾನಿಸಿದೆ. ಆರ್ಥಿಕ ಕುಸಿತ ಉಂಟಾಗಿರುವ ಹಣಕಾಸು ಸ್ಥಿತಿಯನ್ನು ಸರಿದೂಗಿಸುವ ಚಿಂತನೆ ಕಂಪನಿಯದ್ದಾಗಿದೆ. ಇದೇ ವೇಳೆ ಅಡೋಬ್ ಮತ್ತು ಆಪಲ್ ಕಂಪನಿಗಳು ಕೂಡ ಒಂದು ವಾರ ರಜೆ ಘೋಷಿಸಲು ನಿರ್ಧರಿಸಿವೆ. ವಾರ ಕಾಲ ರಜೆ ಘೋಷಣೆಯಿಂದ ಗ್ರಾಹಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಯಾಹೂ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X