ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾನ ಪ್ರಿಯರಿಗೆ ಕಿಕ್ ಕೊಡುವ ಸುದ್ದಿ

By Super
|
Google Oneindia Kannada News

New year party
ಬೆಂಗಳೂರು, ಡಿ.23:ಹೊಸ ವರ್ಷದ ಸ್ವಾಗತಕ್ಕೆ ಹಂಬಲಿಸುವವರಿಗೆ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಒಂದು ವಾರಕ್ಕೆ ಮೊದಲೇ ಮತ್ತೇರಿಸುವ ಸುದ್ದಿ ನೀಡಿದ್ದಾರೆ.ಬೆಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿರುವ ಬಾರ್, ಪಬ್ , ರೆಸ್ಟೋರೆಂಟ್, ಹೋಟೆಲ್ ಹಾಗೂ ಆಹಾರ ಪೂರೈಕೆ ಸ್ಥಳಗಳಿಗೆ ಒಂದು ಗಂಟೆ ಕಾಲ ಹೆಚ್ಚುವರಿ ಸಮಯ ನೀಡಲಾಗಿದೆ.

ಕಳೆದ ವರ್ಷ ಡಿ.31 ರ ರಾತ್ರಿ12. 30 ರ ನಂತರ ಮದ್ಯದಂಗಡಿಗಳನ್ನು ಮುಚ್ಚವಂತೆ ಆದೇಶಿಸಲಾಗಿತ್ತು. ಆದರೆ ಈ ಬಾರಿ ಈ ಅವಧಿಯನ್ನು ಕೊಂಚ ವಿಸ್ತರಿಸಲಾಗಿದೆ. ಆದರೆ, ಕಾಲಾವಧಿ ಮೀರಿದ ಮೇಲೆ ಪರವಾನಿಗೆ ಪಡೆಯದೆ ಖಾಸಗಿ ಪಾರ್ಟಿಗಳಲ್ಲಿ ಕೂಡ ಮದ್ಯ ಹಂಚುವಂತಿಲ್ಲ. ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯಿಂದ ಅಧಿಕೃತವಾಗಿ ಲೈಸನ್ ಪಡೆದ ನಂತರವಷ್ಟೇ ರೆಸಾರ್ಟ್ ಗಳಲ್ಲಿ ಪಾರ್ಟಿ ಮಾಡಬಹುದು ಎಂದು ಬಿದರಿ ಎಚ್ಚರಿಸಿದ್ದಾರೆ.

ಡಿ.31ರಂದು ಬೆಳಗಿನ ಜಾವ 1 ಗಂಟೆಯವರೆಗೂ ಬಾರ್‌ಗಳ ಬಾಗಿಲು ತೆರೆದಿರುತ್ತದೆ. ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರ ಮನವಿ ಹಿನ್ನೆಲೆಯಲ್ಲಿ ಆದೇಶ ನೀಡಿದ್ದು, ಡಿ.31ರಂದು ಮಧ್ಯಾಹ್ನ 3 ಗಂಟೆಯೊಳಗೆ ಅಗತ್ಯ ದಾಖಲೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು. 31ರ ರಾತ್ರಿ ಗುಂಡು ಹಾಕಿ ವಾಹನ ಚಲಾಯಿಸುವವರ ಮೇಲೆ ಯಾವುದೇ ಪ್ರಕರಣ ದಾಖಲಿಸದೆ ಇರಲು ನಿರ್ಧರಿಸಲಾಗಿದೆ.

ಸಾಮಾನ್ಯವಾಗಿ ಡಿ.31ರ ರಾತ್ರಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ನಾವು ಪ್ರಕರಣ ದಾಖಲಿಸುವುದಿಲ್ಲ. ಆ ದಿನ ಅಪಘಾತ ಪ್ರಕರಣ ನಡೆದಾಗ, ಮದ್ಯಪಾನ ಮಾಡಿ ವ್ಯಕ್ತಿ ಮೃತಪಟ್ಟ ಎಂದು ಪೊಲೀಸ್ ಸರ್ಟಿಫಿಕೇಟ್ ನೀಡುವುದು ಅಸಮಂಜಸವೆನಿಸುತ್ತದೆ' ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು 'ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X