ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಿನಾಥ್ ಮುಂಡೆ ಲೋಕಸಭೆ ಉಪನಾಯಕ

By Staff
|
Google Oneindia Kannada News

Gopinath Munde
ನವದೆಹಲಿ, ಡಿ. 22 : ಮಹಾರಾಷ್ಟ್ರದ ಗೋಪಿನಾಥ್ ಮುಂಡೆ ಅವರನ್ನು ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಉಪನಾಯಕರನ್ನಾಗಿ ನೇಮಿಸಲಾಗಿದೆ. ಈವರೆಗೆ ಲೋಕಸಭೆಯಲ್ಲಿ ಬಿಜೆಪಿ ನಾಯಕರಾಗಿದ್ದ ಎಲ್ ಕೆ ಆಡ್ವಾಣಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸುಷ್ಮಾ ಸ್ವರಾಜ್ ಪದೋನ್ನತಿ ಪಡೆದಿದ್ದಾರೆ. ಹೀಗಾಗಿ ಪ್ರತಿಪಕ್ಷದ ನಾಯಕನ ಸ್ಥಾನ ತೆರವಾಗಿತ್ತು.

ಲೋಕಸಭೆಯಲ್ಲಿ ಬಿಜೆಪಿ ಉಪನಾಯಕನ ಸ್ಥಾನಕ್ಕೆ ಸಂಸದ ಹಾಗೂ ಕರ್ನಾಟಕದ ಧುರೀಣ ಅನಂತ್ ಕುಮಾರ್ ಹೆಸರೂ ಚಾಲ್ತಿಯಲ್ಲಿತ್ತು. ಮಹಾರಾಷ್ಟ್ರದ ರಾಜಕೀಯದಲ್ಲಿ ಮುಂಡೆ ಅವರಿಗಿಂತ ಕಿರಿಯರಾದ ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ ಎರಡು ದಿನಗಳ ನಂತರ ಮುಂಡೆ ಅವರಿಗೆ ಲೋಕಸಭೆಯಲ್ಲಿ ಈ ಪ್ರಮುಖ ಸ್ಥಾನ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಇತರ ಹಿಂದುಳಿದ ಜಾತಿಗಳ ಪ್ರಮುಖ ನಾಯಕರಾಗಿರುವ ಮುಂಡೆ, ಮರಾಠಾವಾಡಾ ಪ್ರದೇಶದ ಬೀಡ್ ಲೋಕಸಭೆ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. 1995 ರಿಂದ 1999 ರ ನಡುವೆ ಮಹಾರಾಷ್ಟ್ರದಲ್ಲಿ ಬಿಜೆಪಿ -ಶಿವಸೇನೆ ಸರಕಾರದಲ್ಲಿ ಅವರು ಉಪಮುಖ್ಯಮಂತ್ರಿ ಆಗಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X