ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತಮೂರ್ತಿಯವರ ಕೊನೆಯಾಸೆಯಿದು...

By Staff
|
Google Oneindia Kannada News

UR Ananthamurthy
ಬೆಂಗಳೂರು, ಡಿ. 22 : ಕನ್ನಡದ ನೆಲ ಅಂದರೆ ನೆಲದೊಳಗಿರುವ ಅದಿರು 10 ವರ್ಷದಿಂದ ಲೂಟಿ ನಡೆಯುತ್ತಿದ್ದರೂ ಅವರು ಅತ್ಯಂತ ದುಷ್ಟರು ಅನ್ನಿಸಲಿಲ್ಲ. ಜನ ಏಕೆ ಸುಮ್ಮನಿದ್ದಾರೆ. ಯುವಕರಿಗೆ ಸಿಟ್ಟು, ಸಂಕಟ ಬರದೇ ಇದ್ದರೆ ನಾಡು ಉಳಿಯುವುದು ಹೇಗೆ ? ಸೈದ್ಧಾಂತಿಕ ವಿಷಯದ ಹೋರಾಟಕ್ಕಿಂತ ನೆಲ ಜಲದ ವಿಷಯ ಮುಖ್ಯವಾಗಬೇಕೆಂದು ಜ್ಞಾನಪೀಠ ಪುರಷ್ಕೃತ ಸಾಹಿತಿ ಡಾ ಯು ಆರ್ ಅನಂತಮೂರ್ತಿ ಅಭಿಪ್ರಾಯಪಟ್ಟರು.

ನಗರದ ಸೆಂಟ್ರಲ್ ಕಾಲೇಜಿನಲ್ಲಿ ಅಭಿನವ ಹಾಗೂ ಕ್ಯಾಲಿಫೋರ್ನಿಯಾದ ಸಾಹಿತ್ಯಾಂಜಲಿ ಜೊತೆಯಾಗಿ ಅನಂತಮೂರ್ತಿ 77 ರ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಅನಂತಮೂರ್ತಿಯವರ ಕಾಲಮಾನ ವಿಮರ್ಶಾ ಸಂಕಲನ, ನಾಗ ಐತಾಳ ಸಂಪಾದಿಸಿದ ಅನಂತಮುಖದ ಮೂರ್ತಿ ಪುಸ್ತಕ ಬಿಡುಗಡೆ ಹಾಗೂ ವೆಬ್ ಸೈಟ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಅಭಿವೃದ್ಧಿ ಎಂಬುದು ವಿಷಶಬ್ದ. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶವಾಗುತ್ತಿದೆ. ರೈತರು, ಕುಶಲಕರ್ಮಿಗಳು ತಮ್ಮದೇ ಆದ ರೀತಿಯಲ್ಲಿ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಆದರೆ, ರಾಜಕೀಯ ಪಕ್ಷಗಳು ಬಳಸುವ ಅಭಿವೃದ್ಧಿ ಶಬ್ಧದ ಬಗ್ಗೆ ವಿಮರ್ಶೆ ಆರಂಭವಾಗಬೇಕು. ಹಸಿವು, ಬಡತನ ಅಭಿವೃದ್ಧಿ ಮೂರು ಬೇರೆ ಬೇರೆ. ಅದು ಅರ್ಥ ಆಗಬೇಕು ಎಂದು ಜ್ಞಾನಪೀಠ ಪುರಷ್ಕೃತ ಸಾಹಿತಿ ಡಾ ಯು ಆರ್ ಆನಂತಮೂರ್ತಿ ಪ್ರತಿಪಾದಿಸಿದರು.

ನೆಲ ಮತ್ತ ಜಲಕ್ಕೆ ವಿಷ ಹಾಕುವವರನ್ನು ಬಹಿಷ್ಕರಿಸಿ. ಕನ್ನಡ ಭಾಷೆ ಉಳಿಯಬೇಕಾದರೆ ಎಲ್ಲ ಮಕ್ಕಳೂ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಬೇಕು. ಏಕ ರೀತಿ ಶಾಲೆ, ಸಮಾನ ಶಿಕ್ಷಣ ಎಲ್ಲರಿಗೂ ದೊರೆಯಬೇಕು. ಇದು ನನ್ನ ಕೊನೆಗಾಲದ ಆಸೆ ಎಂದು ಅನಂತಮೂರ್ತಿ ಹೇಳಿದರು. ರಾಜ್ಯದ ಎಲ್ಲ ವಿವಿಗಳ ಕನ್ನಡ ವಿಭಾಗಗಳತ್ತ ವಿಶೇಷವಾಗಿ ಗಮನ ಹರಿಸಬೇಕಾದಂಥ ಅನಿವಾರ್ಯ ಸ್ಥಿತಿ ಬಂದೊದಗಿದೆ. ಅದರಲ್ಲೂ ಬೆಂಗಳೂರು ವಿವಿಯ ಕನ್ನಡ ವಿಭಾಗ ಅಧೋಗತಿಗಿಳಿದಿದೆ. ಈ ವಿಷಯವಾಗಿ ನಾವಿಬ್ಬರೂ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸೋಣ ಎಂಗು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರನ್ನು ಅನಂತಮೂರ್ತಿ ಬಹಿರಂಗವಾಗಿ ವಿನಂತಿಸಿಕೊಂಡರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X