ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿಯಿಂದ ನನ್ನ ಕುಟುಂಬಕ್ಕೆ ಜೀವ ಬೆದರಿಕೆ

By Staff
|
Google Oneindia Kannada News

DK Shivakumar
ಬೆಂಗಳೂರು, ಡಿ. 21 : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಜಯಭೇರಿ ಬಾರಿಸಿದ ಸಂತಸವನ್ನು ಕಾಂಗ್ರೆಸ್ ಪಕ್ಷ ಒಂದಡೆ ಆಚರಿಸಿಕೊಳ್ಳುತ್ತಿದ್ದರೆ, ಇನ್ನೊಂದಡೆ ಯುಥ್ ಕಾಂಗ್ರೆಸ್ ಮತ್ತು ಎನ್ಎಸ್ ಯುಐ ಕಾರ್ಯಕರ್ತರು ಮಾಜಿ ಸಂಸದೆ ತೇಜಸ್ವಿನಿ ಅವರ ಮೇಲೆ ದಾಳಿ ನಡೆಸಿ ರಾದ್ಧಾಂತ ಮಾಡಿಕೊಂಡ ಘಟನೆ ಜರುಗಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲುನುಭವಿಸಿತು. ಟಿವಿ9 ವಾಹಿನಿಯಲ್ಲಿ ಫಲಿತಾಂಶದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ್ದ ತೇಜಸ್ವಿನಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲನುಭಿಸಿದ ತಕ್ಷಣ ಮಾಜಿ ಸಂಸದೆ ಚರ್ಚೆ ಕೈಬಿಟ್ಟು, ಕಾಂಗ್ರೆಸ್ ಪಕ್ಷ ಸೋಲಲು ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಅದಕ್ಕೆ ಕಾರಣವನ್ನೂ ನೀಡಿದ ತೇಜಸ್ವಿನಿ, ಎಂಎಲ್ಸಿ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗಲೂ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಲ್ಲಿಸುವ ಅಗತ್ಯವೇನಿತ್ತು. ಇವರ ಕುತಂತ್ರದಿಂದ ಇಂದು ಪಕ್ಷ ಸೋತಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಟಿವಿ 9 ಸ್ಟುಡಿಯೋದಲ್ಲಿ ಕುಳಿತೇ ಅವರ ವಾಗ್ದಾಳಿ ನಡೆಸಿದರು.

ಆನಂತರ ಯುವಕಾಂಗ್ರೆಸ್ ಮತ್ತು ಎನ್ಎಸ್ ಯುಐ ಕಾರ್ಯಕರ್ತರು ಟಿವಿ 9 ಬಳಿ ಬಂದು ಗಲಾಟೆ ಆರಂಭಿಸಿದರು. ಆಗ ಹೊರಗೆ ಬಂದ ತೇಜಸ್ವಿನಿ ಮೇಲೆ ದಾಳಿ ನಡೆಸಲು ಮುಂದಾದರು. ಆದ ತೇಜಸ್ವಿನಿ ಮತ್ತು ಗುಂಪಿನ ನಡುವೆ ಮಾತಿನ ಚಕಮಕಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ದಾಳಿ ನಡೆದ ನಂತರ ಮತ್ತೆ ಟಿವಿ 9ಗೆ ಸಂದರ್ಶನ ನೀಡಿದ ತೇಜಸ್ವಿನಿ, ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಅದು ಡಿಕೆಶಿ ಅವರ ಗೂಂಡಾ ಪಡೆಯಿಂದ ಬೆದರಿಕೆ ಇದ್ದೇ ಇದೆ. ಕಳೆದ ಎರಡು ವರ್ಷಗಳಿಂದ ಡಿಕೆಶಿಯಿಂದ ಜೀವ ಬೆದರಿಕೆಯಿಂದ ನಾವು ನರಳತೊಡಗಿದ್ದೇವೆ ನೇರಪ್ರಸಾರಗ ಕಾರ್ಯಕ್ರಮವೊಂದರಲ್ಲಿ ತೇಜಸ್ವಿನಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X