ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಮತ್ತೆ ಗ್ರಾಮ ವಾಸ್ಯವ್ಯ

By Staff
|
Google Oneindia Kannada News

Rahul Gandhi
ಜಾನ್ಸಿ(ಉತ್ತರ ಪ್ರದೇಶ), ಡಿ. 21 : ಕಾಂಗ್ರೆಸ್ ಪಕ್ಷದ ಯುವನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ದಲಿತರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಸಿದ್ಧತೆ ನಡೆಸಿದ್ದಾರೆ. ಬಿಗಿ ಭದ್ರತೆಗೆ ಸಂಬಂಧಿಸಿದಂತೆ ವಾಸ್ತವ್ಯ ಕಾರ್ಯಕ್ರಮವನ್ನು ಬಹಿರಂಗಗೊಳಿಸಿಲ್ಲವಾದರೂ ಅತ್ಯಂತ ಹಿಂದುಳಿದ ಪ್ರದೇಶ ಎಂದು ಕರೆಸಿಕೊಂಡಿರುವ ಬುಂಡೇಲಖಂಡದ ಜಾನ್ಸಿ ಜಿಲ್ಲೆಯ ಗಿಸಾಲಿ ಗ್ರಾಮದ ದಲಿತರ ಮನೆಯಲ್ಲಿ ತಂಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇಂದು ಮಧ್ಯಾಹ್ನದ ನಂತರ ಜಾರ್ಟರ್ ಕಾಪ್ಟರ್ ಮೂಲಕ ಜಾನ್ಸಿ ನಗರಕ್ಕೆ ಆಗಮಿಸುವ ಸಂಸದ ರಾಹುಲ್ ಗಾಂಧಿ, ಇಲ್ಲಿಂದ 10 ಕಿಮೀ ದೂರದಲ್ಲಿರುವ ಗಿಸಾಲಿ ಗ್ರಾಮದಲ್ಲಿ ಸರಕಾರೇತರ ಸಂಸ್ಥೆಯೊಂದು ಏರ್ಪಡಿಸಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಗ್ರಾಮ ವಾಸ್ಯವ್ಯ ಮಾಡಲಿದ್ದಾರೆ. ಬುಂಡೇಲಖಂಡ ಪ್ರದೇಶದ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು, ಈ ಗ್ರಾಮದಲ್ಲಿ ದಲಿತರ ಕುಟುಂಬಗಳೆ ಹೆಚ್ಚಾಗಿ ವಾಸಿಸುತ್ತವೆ. ರಾಹುಲ್ ಗಾಂಧಿ ಗ್ರಾಮ ವಾಸ್ತವ್ಯದ ಅಷ್ಟೂ ಸಂಗತಿಯನ್ನೂ ಗುಪ್ತವಾಗಿ ಇಡಲಾಗಿದೆ. ಭದ್ರತಾ ದೃಷ್ಟಿಯಿಂದ ಇದಕ್ಕೆ ಹೆಚ್ಚು ಪ್ರಚಾರ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X