ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ಚುನಾವಣೆ ಫಲಿತಾಂಶ: ಕೈ ಮೇಲುಗೈ

By Staff
|
Google Oneindia Kannada News

Vidhansoudha
ಬೆಂಗಳೂರು, ಡಿ. 21 : ಆಂತರಿಕ ಕಿತ್ತಾಟದಿಂದ ಗೊಂದಲದ ಗೂಡಾಗಿರುವ ರಾಜ್ಯದ ಆಡಳಿತರೂಢ ಬಿಜೆಪಿ ಪಕ್ಷದ ಸದಸ್ಯರನ್ನ ವಿಧಾನ ಪರಿಷತ್ ಮತದಾರರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸರಕಾರದ ಅಭಿವೃದ್ಧಿ ಕಾರ್ಯಗಳೆ ಶ್ರೀರಕ್ಷೆ ಎಂದು ಹೋದಲ್ಲಿ ಬಂದಲ್ಲಿ ಹೇಳಿಕೆ ನೀಡುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿರಾಶೆ ಜೊತೆಗೆ ಮುಖಭಂಗವಾಗಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಫಲ ನೀಡಿದ್ದು, ಕಾಂಗ್ರೆಸ್ 10 ಕಡೆ ಅರ್ಹ ಜಯ ದಾಖಲಿಸಿದ್ದರೆ, ಜೆಡಿಎಸ್ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ತಮ್ಮ ಶಕ್ತಿ ಪ್ರದರ್ಶನ ಮಾಡಿದೆ.

ಉತ್ತರ ಕರ್ನಾಟಕದ ಬಿಜೆಪಿ ಭದ್ರಕೋಟೆ ಎಂದು ಎಣಿಸಲಾಗಿತ್ತು. ಆದರೆ, ಪರಿಷತ್ ಚುನಾವಣೆಯಲ್ಲಿ ಎಲ್ಲಾ ಉಲ್ಟಾ ಆಗಿದ್ದು, ಧಾರವಾಡ, ಬಾಗಲಕೋಟೆ, ಗುಲ್ಬರ್ಗಾ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಫಲಿತಾಂಶಕ್ಕೆ ಪ್ರಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಸಾಧನೆ ಹರ್ಷ ತಂದಿದೆ. ಕಳೆದ ಸಲಕ್ಕಿಂತ ಈ ಸಲ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಎಂದು ಅವರು ಸಮರ್ಥಿಸಿಕೊಂಡರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಫಲಿತಾಂಶ ನಿರೀಕ್ಷಿತ ಎಂದು ಹೇಳಿದ್ದಾರೆ. ಬಿಜೆಪಿ ದುರಾಡಳಿತಕ್ಕೆ ಮತದಾರರ ನೀಡಿದ ಉತ್ತರ. ಇನ್ನೂ ಮುಂದಾದರೂ ಕಾಂಗ್ರೆಸ್ ಪಕ್ಷ ಅತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕಳೆದ ಶುಕ್ರವಾರ 25 ಸ್ಥಾನಗಳಿಗೆ ನಡೆದ ಪರಿಷತ್ ಚುನಾವಣೆಯಲ್ಲಿ 10 ಕಾಂಗ್ರೆಸ್, 10 ಬಿಜೆಪಿ ಹಾಗೂ 5 ಸ್ಥಾನಗಳು ಜೆಡಿಎಸ್ ಪಕ್ಷದ ಪಾಲಾಗಿವೆ. ಆಯ್ಕೆಯಾದ ಅಭ್ಯರ್ಥಿಗಳು ಪಟ್ಟಿ ಇಂತಿದೆ.

10 ಕಾಂಗ್ರೆಸ್, 10 ಬಿಜೆಪಿ, 5 ಜೆಡಿಎಸ್

ಬಾಗಲಕೋಟೆ-ಬಿಜಾಪುರ-ಎಸ್ ಆರ್ ಪಾಟೀಲ್ (ಕಾಂಗ್ರೆಸ್)
ಬೆಳಗಾವಿ2- ವೀರಕುಮಾರ್ ಪಾಟೀಲ್ (ಕಾಂಗ್ರೆಸ್)
ಗುಲ್ಬರ್ಗಾ- ಅಲ್ಲಮಪ್ರಭು ಪಾಟೀಲ್ (ಕಾಂಗ್ರೆಸ್)
ಕೊಡಗು - ಟಿ ಜಾನ್ (ಕಾಂಗ್ರೆಸ್)
ಹುಬ್ಬಳ್ಳಿ-ಧಾರವಾಡ1 - ಶ್ರೀನಿವಾಸ್ ಮಾನೆ (ಕಾಂಗ್ರೆಸ್)
ಚಿಕ್ಕಮಗಳೂರು - ಗಾಯತ್ರಿ ಶಾಂತೇಗೌಡ (ಕಾಂಗ್ರೆಸ್)
ಉತ್ತರ ಕನ್ನಡ - ಎಸ್ ಎಲ್ ಗೋಟ್ನೇಕರ್ (ಕಾಂಗ್ರೆಸ್)
ದಕ್ಷಿಣ ಕನ್ನಡ 1 - ಪ್ರತಾಪ್ ಚಂದ್ರ ಶೆಟ್ಟಿ ( ಕಾಂಗ್ರೆಸ್)
ಕೋಲಾರ - ನಜೀರ್ ಅಹಮದ್ (ಕಾಂಗ್ರೆಸ್)
ಬೆಂಗಳೂರು - ದಯಾನಂದರೆಡ್ಡಿ (ಕಾಂಗ್ರೆಸ್)
ಮೈಸೂರು: ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ (ಬಿಜೆಪಿ)
ಬಳ್ಳಾರಿ- ಮೃತ್ಯುಂಜಯ ಜಿನಗಾ (ಬಿಜೆಪಿ)
ಬೆಳಗಾವಿ1- ಮಹಾಂತೇಶ್ ಕವಟಿಗಿಮಠ (ಬಿಜೆಪಿ)
ರಾಯಚೂರು - ಹಾಲಪ್ಪ ಆಚಾರ್ (ಬಿಜೆಪಿ)
ಹುಬ್ಬಳ್ಳಿ-ಧಾರವಾಡ2 - ಶಿವರಾಜ್ ಸಜ್ಜನ್ (ಬಿಜೆಪಿ)
ದಕ್ಷಿಣ ಕನ್ನಡ 2 - ಶ್ರಿನಿವಾಸ ಪೂಜಾರಿ (ಬಿಜೆಪಿ)
ಬೀದರ್ - ಬಸವರಾಜ್ ಪಾಟೀಲ್ ಹುಮ್ನಾಬಾದ್ (ಬಿಜೆಪಿ)
ಶಿವಮೊಗ್ಗ - ಆರ್ ಕೆ ಸಿದ್ಧರಾಮಣ್ಣ (ಬಿಜೆಪಿ)
ಚಿತ್ರದುರ್ಗ - ಜೆ ಎಚ್ ತಿಪ್ಪಾರೆಡ್ಡಿ(ಬಿಜೆಪಿ)

ಬೆಂಗಳೂರು ಗ್ರಾಮಾಂತರ - ಈ ಕೃಷ್ಣಪ್ಪ (ಜೆಡಿಎಸ್)
ಮೈಸೂರು1 - ಸಂದೇಶ್ ನಾಗರಾಜ್ (ಜೆಡಿಎಸ್)
ಹಾಸನ- ಪಟೇಲ್ ಶಿವರಾಮ್ (ಜೆಡಿಎಸ್)
ಮಂಡ್ಯ - ರಾಮಕೃಷ್ಣ (ಜೆಡಿಎಸ್)
ತುಮಕೂರು - ಡಾ ಎಂ ಆರ್ ಹುಲಿನಾಯ್ಕರ್ (ಜೆಡಿಎಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X