ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಪಾಸಾಗುವ ಭಯ : ಕೆರೆಗೆ ಹಾರಿದ ವಿದ್ಯಾರ್ಥಿನಿ

By Staff
|
Google Oneindia Kannada News

Studemt jumps into lake in Madikeri
ಮಡಿಕೇರಿ, ಡಿ. 19 : ಪರೀಕ್ಷೆಯಲ್ಲಿ ಫೇಲಾಗುವೆನೆಂಬ ಭಯದಿಂದ ಇಂಜಿನಿಯರಿಂಗ್ ಕಾಲೇಜಿನ ಯುವತಿಯೊಬ್ಬಳು ಕಾಲೇಜಿನ ಬಳಿಯ ಕೆರೆಗೆ ಹಾರಿರುವ ಘಟನೆ ಗೋಣಿಕೊಪ್ಪದಲ್ಲಿ ಶುಕ್ರವಾರ ನಡೆದಿದೆ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ರಶ್ಮಿ ಪೊನ್ನಂಪೇಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ. ಹಿಂದಿನ ಪರೀಕ್ಷೆಗಳಲ್ಲೆಲ್ಲ ಉತ್ತಮ ಅಂಕಗಳನ್ನೇ ತೆಗೆದಿದ್ದಳು. ಆದರೆ, ಕಳೆದ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲಿಲ್ಲವೆಂಬ ಕೊರಗು ಆಕೆಯನ್ನು ಕಾಡುತ್ತಿತ್ತು. ಅದನ್ನು ಆಕೆಯ ಕೆಲ ಗೆಳತಿಯರಿಗೆ ಕೂಡ ಹೇಳಿದ್ದಳು.

ಆದರೆ, ಶುಕ್ರವಾರದಿಂದ ಆಕೆ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಕೆರೆಯ ಬಳಿ ರಶ್ಮಿಗೆ ಸೇರಿದ ಮೊಬೈಲ್ ಮತ್ತು ಚಪ್ಪಲಿಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆರೆಯಲ್ಲಿ ಆಕೆಯ ದೇಹಕ್ಕಾಗಿ ಹುಡುಕಾಟ ಸಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X