ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಲಗಿರೀಸ್ ಕೇಕ್ ಪ್ರದರ್ಶನದಲ್ಲಿ ಯುದ್ಧನೌಕೆ

By Staff
|
Google Oneindia Kannada News

Cake exhibition during Christmas in Bengaluru
ಬೆಂಗಳೂರು, ಡಿ. 19 : ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನದಲ್ಲಿ ಪ್ರತಿವರ್ಷ ಕ್ರಿಸ್ಮಸ್ ಸಂದರ್ಭದಲ್ಲಿ ನಡೆಯುವ ಕೇಕ್ ಪ್ರದರ್ಶನ ಶುಕ್ರವಾರದಿಂದ ಆರಂಭವಾಗಿದ್ದು, ನಗರದ ಕೇಕ್ ಪ್ರಿಯರನ್ನು ಆಕರ್ಷಿಸುತ್ತಿದೆ.

ಈ ಬಾರಿ, 35ನೇ ನೀಲಗಿರೀಸ್ ವಾರ್ಷಿಕ ಕೇಕ್ ಪ್ರದರ್ಶನದಲ್ಲಿ ಬೃಹತ್ ಗಾತ್ರದ ತಾಜ್ ಮಹಲ್ ಜೊತೆ ಯುದ್ಧನೌಕೆ ಕೂಡ ಮೈದಾನದಲ್ಲಿ ಮೈದಳೆದು ನಿಂತಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಬಾಯಲ್ಲಿ ನೀರಿಳಿಯುತ್ತಿದ್ದರೂ ದೂರದಿಂದ ಇವನ್ನು ನೋಡಿ ಆನಂದಿಸಬಹುದಷ್ಟೇ. ತಿನ್ನಬೇಕೆಂದಿದ್ದರೆ ಮಳಿಗೆಗಳಲ್ಲಿರುವ ವೈವಿಧ್ಯಮಯ ಕೇಕುಗಳನ್ನು ತಿಂದು ಜೀಹ್ವಾಚಾಪಲ್ಯವನ್ನು ತೀರಿಸಿಕೊಳ್ಳಬಹುದು.

12 ಅಡಿ ಎತ್ತರ ಮತ್ತು 40 ಅಡಿ ಉದ್ದವಿರುವ ಯುದ್ಧ ನೌಕೆ ಮತ್ತು ತಾಜ್ ಮಹಲ್ ರಚನೆಗಾಗಿ ಸುಮಾರು 500 ಟನ್ನಿನಷ್ಟು ಸಕ್ಕರೆ ಮತ್ತು ಜಿಲ್ಯಾಟಿನ್ ಅನ್ನು ಬಳಸಲಾಗಿದೆ. ಕಳೆದ ಎರಡೂವರೆ ತಿಂಗಳಿಂದ 25 ಕಲಾಕಾರರು ಈ ಎರಡು ಸಕ್ಕರೆ ಲೇಪಿತ ಕಲಾಕೃತಿಗಳ ರಚನೆಯಲ್ಲಿ ತೊಡಗಿದ್ದರು ಎಂದು ಆಯೋಜಕರಾದ ರಾಮಚಂದ್ರನ್ ತಿಳಿಸಿದ್ದಾರೆ.

ಈ ಪ್ರದರ್ಶನ ಡಿಸೆಂಬರ್ 18ರಿಂದ 28ರವರೆಗೆ ನಡೆಯಲಿದೆ. ಪ್ರದರ್ಶನದ ನಂತರ ಬೃಹತ್ ಕೇಕುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಅನಾಥಾಲಯಗಳಿಗೆ ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X