ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ದರ ಏರಿಕೆ ಇಲ್ಲ: ಸಚಿವ ಕಟ್ಟಾ

By Staff
|
Google Oneindia Kannada News

Katta Subramanya Naidu
ಬೆಂಗಳೂರು, ಡಿ. 17: ನೀರಿನ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲವೆಂದು ಬೆಂಗಳೂರು ಜಲಮಂಡಲಿ ಹಾಗೂ ಅಬಕಾರಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ. ಗೃಹ ಹಾಗೂ ಗೃಹೇತರ ಶುಲ್ಕ ಪರಿಷ್ಕರಣೆಯಾಗಲಿದೆ ಎಂಬ ಮಾಧ್ಯಮಗಳ ವರದಿ ಕುರಿತು ಮಾತ ನಾಡಿದ ಸಚಿವ ಕಟ್ಟಾ, ವಿದ್ಯುತ್ ದರ ಹೆಚ್ಚಳವಾಗಿದ್ದರೂ ಜಲಮಂಡಲಿ ತನ್ನ ಗ್ರಾಹಕರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದರು.

ಮುಂದಿನ ತಿಂಗಳಲ್ಲಿ ನಡೆಯುವ ಮಂಡಲಿ ಸಭೆಯಲ್ಲಿ ನೀರಿನ ದರ ಏರಿಕೆ ಕುರಿತು ಚರ್ಚೆ ನಡೆಯಲಿದೆ. ಇತ್ತೀಚಿಗಷ್ಟೆ ವಿದ್ಯುತ್ ದರಹೆಚ್ಚಳವಾದ ಕಾರಣ ಸಂಸ್ಥೆ ಮೇಲೆ ಪ್ರತಿ ತಿಂಗಳು 2 ಕೋಟಿ ರೂ. ಹೆಚ್ಚವರಿ ವೆಚ್ಚ ಬರುತ್ತಿದ್ದು, ಅದನ್ನು ಸರಿದೂಗಿಸಲು ಅಲ್ಪ ಪ್ರಮಾಣದಲ್ಲಿ ಶುಲ್ಕ ಏರಿಸಬೇಕೆಂಬ ವಿಚಾರ ಅಧಿಕಾರಿ ವರ್ಗದಲ್ಲಿದೆ. ಆದರೆ ಮುಂದೆ ಬರಲಿರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ದರ ಪರಿಷ್ಕರಣೆ ಮಾಡದಿರುವಂತೆ ಮುಖ್ಯಮಂತ್ರಿ ಜಲಮಂಡಳಿ ಸಚಿವರಿಗೆ ಸೂಚಿಸಿದ್ದಾರೆನ್ನಲಾಗಿದೆ. ಹಾಗಾಗಿ ಯುಗಾದಿವರೆಗೂ ಗ್ರಾಹಕರು ನಿರಾಳವಾಗಿ ರಬಹುದು.

ಮಳೆನೀರು ಕೊಯ್ಲಿಗೆ ಕಾಯ್ದೆ: ಬೆಂಗಳೂರು ಮಹಾನಗರದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಈ ಸಂಬಂಧ ನಿರ್ಧಾರ ಕೈಗೊಂಡಿದ್ದು, ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಲು ಕಾಯ್ದೆ ರೂಪಿಸಲಾಗುತ್ತಿದೆ. ಮುಂದಿನ ಬಜೆಟ್‌ಗೆ ಮುನ್ನ ಕಾಯ್ದೆ ಸಿದ್ಧಪಡಿಸಿ ಅನುಮೋದನೆ ಪಡೆಯಲಾಗುವುದು. ಜತೆಗೆ ಈ ಪ್ರಸ್ತಾಪವನ್ನು ರಾಜ್ಯದ ಎಲ್ಲ ನಗರ ಪ್ರದೇಶಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಹಾಗಾಗಿ ನಗರಾಭಿವೃದ್ಧಿ, ಲೋಕೋಪಯೋಗಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.

ಇದರಿಂದಾಗಿ ಸರ್ಕಾರದ ಎಲ್ಲ ಕಚೇರಿಗಳು, ಶಾಲಾ-ಕಾಲೇಜು, ಕೈಗಾರಿಕೆಗಳಲ್ಲಿ ಮಳೆನೀರು ಅನುಷ್ಠಾನಗೊಳ್ಳಲಿದೆ ಎಂದು ಸಚಿವ ಕಟ್ಟಾ ತಿಳಿಸಿದರು.ಮನೆಗಳಲ್ಲಿ ಮಳೆಕೊಯ್ಲು (rain water harvesting)ವಿಧಾನವನ್ನು ಬಳಸಿ ಪರಿಸರ ಜಾಗೃತಿ ಮೆರೆಯುವ ಗ್ರಾಹಕರನ್ನು ಪ್ರೋತ್ಸಾಹಿಸಲು ನೀರಿನ ಬಿಲ್ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆದಿದೆ . ವಾಣಿಜ್ಯ ಕಟ್ಟಡಗಳಿಗೂ ಈ ನೀತಿ ಅನ್ವಯವಾಗಲಿದೆ. ಸೌರಶಕ್ತಿ ಬಳಸುವ ಗ್ರಾಹಕರಿಗೆ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿಯನ್ನು ಸರ್ಕಾರ ಈಗಾಗಲೆ ನೀಡುತ್ತಿದೆ ಎಂದು ಕಟ್ಟಾ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X