ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ .ಕಾಂ ಹ್ಯಾಕ್ ಆಗಿತ್ತು ಗೊತ್ತಾ?

By Staff
|
Google Oneindia Kannada News

Twitter in local languages
ಬೆಂಗಳೂರು, ಡಿ. 18: ಇಂದಿನ ಅಧುನಿಕ ತಂತ್ರಜ್ಞಾನಯುಗದಲ್ಲಿ ದಿನಕ್ಕೊಂದು ಹೊಸ ಆವಿಷ್ಕಾರಗಳು ಹೊರಬರುತ್ತಲೇ ಇರುತ್ತವೆ. ಟೆಕ್ಕಿಗಳಿಗೆ, ಗಣಕಕ್ಕೆ ಜೋತುಬಿದ್ದವರಿಗೆ ಫೇಸ್ ಬುಕ್, ಆರ್ಕುಟ್ ,ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ ಗಳು, ಎಸ್ ಎಂಎಸ್ , ಚಾಟ್, ಬ್ಲಾಗ್, ಮೈಕ್ರೊಬ್ಲಾಗಿಂಗ್, ನ್ಯಾನೋ ಬ್ಲಾಗಿಂಗ್..ಹೊಸದೇನಲ್ಲ. ಟ್ವಿಟ್ಟರ್ ಎಂಬ ಮೈಕ್ರೋ ಬ್ಲಾಗಿಂಗ್ ಅಪ್ಲಿಕೇಷನ್ ಎಷ್ಟು ಪ್ರಸಿದ್ಧವೋ ಅದಕ್ಕೆ ಅಷ್ಟೇ ಉಪಟಳಗಳು ಜಾಸ್ತಿ. ಗುರುವಾರ ಸಂಜೆ ಟ್ವಿಟ್ಟರ್ .ಕಾಂನ ಅತಿಕ್ರಮಣ ನಡೆದ ಸುದ್ದಿ ಹೊರಬಿದ್ದಿದೆ.

ಇರಾನಿಯನ್ ಸೈಬರ್ ಆರ್ಮಿ ಎಂಬ ಹೆಸರಿನ ಸಂಘ ಇದರ ಹೊಣೆಹೊತ್ತಿದೆ. http://www.mowjcamp.org/ ಎಂಬ ತಾಣವನ್ನು ಅತಿಕ್ರಮಿಸಿ (ಹ್ಯಾಕ್) ಮಾಡಿ ಅರೇಬಿಕ್ ಭಾಷೆಯಲ್ಲಿ ಸಂದೇಶವೊಂದನ್ನು ಬಿಟ್ಟಿದ್ದರು. ಅದೇ ಸಂದೇಶವನ್ನು ಟ್ವಿಟ್ಟರ್ .ಕಾಂ ಮಖ್ಯಪುಟದಲ್ಲೂ ಹಾಕಿದ್ದರು. ಅದರ ಸುಧಾರಿತ ಸಾರಾಂಶ ಆಂಗ್ಲಭಾಷೆಯಲ್ಲಿ ಹೀಗೆ ಬರಬಹುದು.
"Iranian Cyber Army

THIS SITE HAS BEEN HACKED BY IRANIAN CYBER ARMY

[email protected]

U.S.A. Think They Controlling And Managing Internet By Their Access, But THey Don't, We Control And Manage Internet By Our Power, So Do Not Try To Stimulation Iranian Peoples To….

NOW WHICH COUNTRY IN EMBARGO LIST? IRAN? USA?

WE PUSH THEM IN EMBARGO LIST

Take Care."

ಡಿ.17 ರಂದು ಈ ಕೃತ್ಯ ನಡೆದಿದೆ. ಟ್ವಿಟ್ಟರ್ ಮುಖ್ಯಪುಟ ಕಪ್ಪು ಹಿನ್ನೆಲೆಗೆ ಬದಲಾಗಿತ್ತು. ಹಸಿರು ಬಾವುಟ ಹಾರುತ್ತಿತ್ತು. "Iranian Cyber Army ... This Website Has Been Hacked by Iranian Cyber Army." ಎಂಬ ಸಂದೇಶ ಕಾಣಿಸುತ್ತಿತ್ತು. ಈ ಹ್ಯಾಕರ್ ಗಳ ಕೈಲಿ ಸುಮಾರು ಒಂದು ತಾಸು ಟ್ವಿಟ್ಟರ್ ನಲುಗಿತ್ತು ಎಂದು ಟೆಕ್ ಕ್ರಂಚ್ ತಂಡ ಹೇಳಿದೆ. ತಜ್ಞರ ಸಲಹೆಯಂತೆ ಟ್ವಿಟ್ಟರ್ ಪಾಸ್ ವರ್ಡ್ಅನ್ನು ಆಗಾಗ್ಗೆ ಬದಲಾಯಿಸುವುದು ಉತ್ತಮ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X