ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಂದಲಗಳ ಗೂಡಾದ ಬಿಜೆಪಿ ಪಾಳೆಯ

By Staff
|
Google Oneindia Kannada News

Karnataka BJP president Sadananda Gowda
ಮಂಗಳೂರು, ಡಿ.17 : ಭಿನ್ನಮತೀಯ ಬಿಜೆಪಿ ಶಾಸಕರ ಚಟುವಟಿಕೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಿರುಸಿನ ರಾಜಕೀಯ ಸಂಚಲನ ಆರಂಭವಾಗಿವೆ. ಭಿನ್ನಮತೀಯರನ್ನು ತೃಪ್ತಗೊಳಿಸುವ ಹಿನ್ನೆಲೆಯಲ್ಲಿ ಸಂಕ್ರಾಂತಿ ವೇಳೆಗೆ ಮಂತ್ರಿಮಂಡಲ ಪುನಾರಚನೆ ಮಾಡುವ ಮಂತ್ರಾಲೋಚನೆಗಳ ನಡುವೆಯೇ ಮತ್ತೆ ಶಿಸ್ತು ಅಶಿಸ್ತು ಶಿಸ್ತುಕ್ರಮದ ಮಾತುಗಳನ್ನು ಭಾರತೀಯ ಜನತಾಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸದಾನಂದಗೌಡರು ಆಡಿದ್ದಾರೆ. ಅವರು ಇಂದು ಮಂಗಳೂರಿನಲ್ಲಿ ಹೇಳಿರುವ ಕೆಲವು ವಿಚಾರಗಳ ಬುಲೆಟ್ ಪಾಯಿಂಟುಗಳು ಇಂತಿವೆ :

* ಭಿನ್ನಮತ ಶಾಸಕರರಿಗೆ ಬಿಜೆಪಿ ಎಚ್ಚರಿಕೆ ಕೊಡುತ್ತದೆ.
* ಅಶಿಸ್ತು ತೋರುವ ಅಂತಹವರ ವಿರುದ್ಧ ಶಿಸ್ತುಕ್ರಮಕ್ಕೆ ಹೈಕಮಾಂಡ್ ಹಿಂಜರಿಯುವುದಿಲ್ಲ.
* ಬ್ಲಾಕ್ ಮೇಲ್ ತಂತ್ರಕ್ಕೆ ನಾವು ಮಣಿಯುವುದಿಲ್ಲ.
* ಕೆಲವರು ಶಾಸಕರು ಜೆಡಿಎಸ್ ನೊಂದಿಗೆ ಸಂಪರ್ಕ ಸಾಧಿಸಿರುವುದು ನಮಗೆ ಗೊತ್ತಿದೆ.
* ಇದೇ ವೇಳೆ ಸರಕಾರ ಭದ್ರವಾಗಿದೆ, ಚಿಂತೆಯಿಲ್ಲ. 117 ಶಾಸಕರು ಒಟ್ಟಿಗಿದ್ದಾರೆ.
* ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ವಿರೋಧಾಭಾಸದ ಹೇಳಿಕೆ ಕೊಡುತ್ತಿವೆ.
* ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ 15 ಸ್ಥಾನಗಳು ಖಂಡಿತ.

ಇವೆಲ್ಲದರ ನಡುವೆ ಎಚ್ ಡಿ ದೇವೇಗೌಡರು ಒಂದು ಹೇಳಿಕೆ ನೀಡಿದ್ದು ಅದು ಹೀಗಿದೆ. 'ಬಿಜೆಪಿ ಶಾಸಕರನ್ನು ಜೋಪಾನವಾಗಿಟ್ಟುಕೊಳ್ಳುವುದು ಬಿಜೆಪಿ ಜವಾಬ್ದಾರಿ.'

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X