ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆ ಮುಂಚಿತವಾಗಿ ತೆರೆಯಲಿದೆ !

By Staff
|
Google Oneindia Kannada News

BSE
ಮುಂಬೈ,ಡಿ.16: ಶುಕ್ರವಾರ(ಡಿ.18)ದಿಂದ ಮೊದಲಗೊಂಡು ಬಾಂಬೆ ಸಾಕ್ಟ್ ಎಕ್ಸ್ ಚೇಂಚ್(ಬಿಎಸ್ ಇ) ತನ್ನ ಷೇರು ವ್ಯವಹಾರವನ್ನು 10 ನಿಮಿಷ ಮೊದಲು ಆರಂಭಿಸಲಿದೆ. ಈಗ ಷೇರುಪೇಟೆ ಬೆಳಗ್ಗೆ 9.55ಕ್ಕೆ ಆರಂಭವಾಗುತ್ತಿದ್ದು, ಡಿ.18 ರಿಂದ 9.45 ನಿಮಿಷಕ್ಕೆ ಬಾಗಿಲು ತೆರೆಯಲಿದೆ.

ಈ ಸಮಯದ ಮಾರ್ಪಾಟು ಎಲ್ಲಾ ವ್ಯಾವಹಾರಿಕ ದಿನಗಳಿಗೆ ಅನ್ವಯಿಸಲಿದೆ ಎಂದು ಬಿಎಸ್ ಇ ಪ್ರಕಟನೆಯಲ್ಲಿ ತಿಳಿಸಿದೆ. ವಿದೇಶಿ ಬಂಡವಾಳದಾರರನ್ನು ಆಕರ್ಷಿಸಲು ಬಿಎಸ್ ಇ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಕೆಲಸದ ಸಮಯ ಬದಲಾವಣೆ ಕೂಡ ಒಂದಾಗಿದೆ ಎನ್ನಲಾಗಿದೆ. ಬಿಎಸ್ ಇ ಕಾರ್ಯತಂತ್ರ ಬದಲಾವಣೆಗೆ ಮಾರುಕಟ್ಟೆ ನಿಯಂತ್ರಕಬೋರ್ಡ್ ಆದ ಸೆಬಿ(SEBI) ಇಂದ ಒಪ್ಪಿಗೆ ಸಿಕ್ಕಿ ಎರಡು ತಿಂಗಳು ಕಳೆದಿದೆ.

ಇದರ ಅನ್ವಯ ಹೆಚ್ಚು ಅವಧಿ ಷೇರು ವ್ಯವಹಾರ ನಡೆಸಲು ಅನುಮತಿ ನೀಡಲಾಗಿದೆ. ಈ ಮುಂಚೆ ಸಮಯ ಬದಲಾವಣೆ (ಹೆಚ್ಚುವತಿ ಎರಡೂವರೆ ಅವಧಿ ವಿಸ್ತರಣೆ)ಹಾಗೂ ಕಾರ್ಯತಂತ್ರ ಮಾರ್ಪಾಟಿಗೆ ಎನ್ ಎಸ್ ಇ(National Stock Exchange) ಮನವಿ ಮಾಡಿತ್ತು. ಸೆಬಿಯಿಂದ ಅನುಮತಿ ದೊರೆತು ಈಗ ನೂತನ ವ್ಯವಹಾರಿಕ ಸಮಯ ಜಾರಿಗೆ ಬಂದಿದೆ.

ಡಿ. 17 ಪರಿಷ್ಕೃತ ಸುದ್ದಿ : ಇತ್ತೀಚಿನ ಮಾಹಿತಿಯಂತೆ ಷೇರು ಪೇಟೆ 10 ನಿಮಿಷಕ್ಕೆ ಬದಲಾಗಿ 55 ನಿಮಿಷ ಮುಂಚಿತವಾಗಿ (9 am)ಆರಂಭವಾಗಲಿದೆ.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X