ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾದಿಂದ ರಾಜ್ಯದಲ್ಲಿ 700 ಕೋಟಿ ಹೂಡಿಕೆ

By Staff
|
Google Oneindia Kannada News

TATA Docomo GSM Service
ಬೆಂಗಳೂರು ಡಿ 15 : ಟಾಟಾ ಟೆಲಿಸರ್ವಿಸೆಸ್ ಮತ್ತು ಎನ್ ಟಿ ಟಿ ಜಪಾನ್ ಜಂಟಿ ಮಾಲೀಕತ್ವದ ಟಾಟಾ ಡೋಕಾಮೋ ರಾಜ್ಯದಲ್ಲಿ ತನ್ನ ಮೊಬೈಲ್ ಜಾಲ ವಿಸ್ತರಿಸಲು 700 ಕೋಟಿ ರೂಪಾಯಿ ( 150 ಮಿಲಿಯನ್ ಡಾಲರ್) ಬಂಡವಾಳ ಹೂಡಲಿದೆ. ಒಟ್ಟಾರೆ ರಾಜ್ಯದಲ್ಲಿ 1400 ಕೋಟಿ ರೂಪಾಯಿ ಬಂಡವಾಳ ಹೂಡುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.

ಉತ್ತಮ ಕೇಬಲ್ ವ್ಯವಸ್ಥೆ ಮತ್ತು ಎಕ್ಷಚೇಂಜ್ ನಲ್ಲಿ ಉನ್ನತ ಮಟ್ಟದ ತಂತ್ರಜ್ಞಾನದ ಬಗ್ಗೆ ಗಮನ ಹರಿಸಲಾಗುವುದು. ಕಳೆದ ಮೂರು ತಿಂಗಳಲ್ಲಿ ಚಂದಾದಾರರ ಸಂಖ್ಯೆ ಗಣನೀಯ ಮಟ್ಟದಲ್ಲಿ ಹೆಚ್ಚಿದೆ. ರಾಜ್ಯದ 450 ಪಟ್ಟಣ ಮತ್ತು 3000 ಹಳ್ಳಿಗಳಲ್ಲಿ ಈಗಾಗಲೇ ಡೊಕಾಮೊ ತನ್ನ ಕಾರ್ಯ ಆರಂಭಿಸಿದೆ ಎಂದು ಸಂಸ್ಥೆಯ ಅಧಿಕಾರಿ ಯತೀಶ್ ಮೆಹರೋತ್ರ ಹೇಳಿಕೆನೀಡಿದ್ದಾರೆ.

ಟಾಟಾ ಸಂಸ್ಥೆ ಸಿಡಿಎಂಎ ತಂತ್ರಜ್ಞಾನ ಆಧಾರಿತ ಮೊಬೈಲ್ ಗಳನ್ನು ಪರಿಚಯಿಸಿದ ನಂತರ ಜಿಎಸ್ ಎಂ ಮೊಬೈಲ್ ಗಳತ್ತ ಗಮನ ಹರಿಸಿತು. ಕಳೆದ ಮೂರು ತಿಂಗಳಲ್ಲಿ ಹೊಸ ಸಂಪರ್ಕ ಪಡೆದ ಗ್ರಾಹಕರಲ್ಲಿ ಶೇ.50 ರಷ್ಟು ಜಿಎಸ್ ಎಂ ಮೊಬೈಲ್ ಚಂದಾದಾರರಾಗಿದ್ದಾರೆ ಎಂದು ಮೆಹರೋತ್ರ ಹೇಳಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X