ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ವರ್ಷದ ಮಕ್ಕಳಿಗೆ ಶಿಕ್ಷಣ ಕಡ್ಡಾಯ :ಕಾಗೇರಿ

By Staff
|
Google Oneindia Kannada News

Vishveshwara Hegde Kageri
ಬೆಂಗಳೂರು, ಡಿ.15: ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಶಾಲೆಗಳಿಗೆ ಪ್ರವೇಶ ಬಯಸುವ ಮಕ್ಕಳ ವಯೋಮಿತಿಯನ್ನು 5 ವರ್ಷ ಎಂದು ನಿಗದಿ ಪಡಿಸಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಶಾಲಾ ಪ್ರವೇಶಕ್ಕೆ ಸಂಬಂಧಿಸಿದಂತೆ ಹೊಸ ನೀತಿಯು 2010-11ರ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಬರಲಿದೆ. ಸುಮಾರು 10 ಲಕ್ಷಕ್ಕೂ ಅಧಿಕ ಮಕ್ಕಳು ಪ್ರತಿವರ್ಷ ಪ್ರಾಥಮಿಕ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಏಪ್ರಿಲ್ 2009 ರ ಗಣತಿಯಂತೆ ಸುಮಾರು 17,000 ವಿದ್ಯಾರ್ಥಿಗಳು ಎಸ್ಸೆಸೆಲ್ಸಿ ಪಾಸಾಗಿದ್ದಾರೆ. ಇವರೆಲ್ಲರೂ ಐದು ವರ್ಷ ವಯಸ್ಸು ಪೂರೈಸುವ ಮೊದಲೇ ಶಾಲೆಗೆ ಸೇರಿದವರಾಗಿದ್ದಾರೆ. ಆದರೆ, ಸದರಿ ನೀತಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂದು ಸಚಿವ ಕಾಗೇರಿ ಸ್ಪಷ್ಟಪಡಿಸಿದರು.

ಈ ಹೊಸ ನೀತಿ ಬಗ್ಗೆ ವಿಭಾಗೀಯ ಶಿಕ್ಷಣಾಧಿಕಾರಿ, ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಮುಖ್ಯಸ್ಥರಿಗೆ ಕೂಡಲೇ ಮನವರಿಕೆ ಮಾಡಿಕೊಡಲಾಗುವುದು ಹಾಗೂ ಐದು ವರ್ಷಕ್ಕಿಂತ ಕಡಿಮೆ ಪ್ರಾಯದವರಿಗೆ ಒಂದನೇ ತರಗತಿಗೆ ಪ್ರವೇಶ ನೀಡಿದರೆ, ಪ್ರವೇಶಾತಿಯನ್ನು ರದ್ದುಗೊಳಿಸಲಾಗುವುದು. ಐದು ವರ್ಷ( ಕಡ್ಡಾಯ ನಿಯಮದಂತೆ ಐದು ವರ್ಷ 10 )ತಿಂಗಳು ತುಂಬಿದ ಮಕ್ಕಳನ್ನು ಸ್ವಯಂ ಪ್ರೇರಿತರಾಗಿ ಶಾಲೆಗೆ ಸೇರಿಸುವುದು ಪೋಷಕರ ಆದ್ಯ ಕರ್ತವ್ಯ ಎಂದು ಕಾಗೇರಿ ಹೇಳಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X