ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಗಂಟೆ ಕಲಾಪಕ್ಕೆ ರು.42 ಲಕ್ಷ ಖರ್ಚು

By Staff
|
Google Oneindia Kannada News

Vidhanasoudha
ಬೆಂಗಳೂರು, ಡಿ.15 : ಸೋಮವಾರ ( ಡಿ.14 ) ನಡೆದ ನಾಮಕೆವಾಸ್ತೆ ವಿಧಾನ ಮಂಡಲ ಅಧಿವೇಶನದಿಂದ ತೆರಿಗೆದಾರನ ರು.41 .17 ಲಕ್ಷ ಪೋಲಾಗಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಅಧಿವೇಶನವನ್ನು ಮುಂದೂಡಲು ಆಡಳಿತ ಮತ್ತು ವಿರೋಧಪಕ್ಷಗಳು ಮೊದಲೇ ನಿರ್ಧರಿಸಿದ್ದವು. ಆದರೂ ಕೇವಲ ಒಂದು ತಾಸು ಅಧಿವೇಶನ ನಡೆಸಿ ಲಕ್ಷ ಲಕ್ಷ ಪೋಲು ಮಾಡಿರುವ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈ ಎರಡು ತಾಸು ಅವಧಿಯಲ್ಲಿ ನಡೆದದ್ದು ಕೇವಲ ಸಂತಾಪ ಸೂಚನೆ ಮಾತ್ರ. ನಂತರ ಸದನವನ್ನು ಡಿಸೆಂಬರ್ 21ಕ್ಕೆ ಮುಂದೂಡಲಾಯಿತು. ಸಚಿವಾಲಯದ ಮೂಲಗಳ ಪ್ರಕಾರ ಎರಡು ತಾಸು ಅಧಿವೇಶನದಿಂದ ಸರಕಾರದ ಬೊಕ್ಕಸಕ್ಕೆ 41 .17 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದರಲ್ಲಿ ಶಾಸಕರ ವೇತನ ಮತ್ತು ವಾಹನ ಭತ್ಯೆಗೆ 25 .29 ಲಕ್ಷ ರೂಪಾಯಿ ಆಗಲಿದೆ. ಉಳಿದ ಹಣ ಭದ್ರತೆ ಮತ್ತು ಇತರ ಸಹಾಯಕರ ವೆಚ್ಚಗಳು.

ಶಾಸಕರು ಒಂದೇ ದಿನದ ಅಧಿವೇಶನದಲ್ಲಿ ಪಾಲ್ಗೊಂಡಿದ್ದರೂ 5 ದಿನಗಳ ಭತ್ಯೆ ಪಡೆಯುವರು. ನಿಯಮದ ಪ್ರಕಾರ ದಿನವೊಂದಕ್ಕೆ ರು.600 ಭತ್ಯೆ ದೊರೆಯುತ್ತದೆ. ಅಧಿವೇಶನ ನಡೆದ ಹಿಂದಿನ ಹಾಗೂ ನಂತರದ ತಲಾ 2 ದಿನಗಳನ್ನು ಪ್ರಯಾಣದ ಅವಧಿ ಎಂದು ಪರಿಗಣಿಸಿ ಭತ್ಯೆ ನೀಡಲಾಗುತ್ತದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X