ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಸಹೋದರರು ದೇಶದ ಶನಿಗಳು, ಸಿದ್ದು

By Staff
|
Google Oneindia Kannada News

Vidhanasoudha
ಬೆಂಗಳೂರು, ಡಿ.14: ವಿಧಾನಸಭೆಯ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿರುವ ಬಳ್ಳಾರಿ ರೆಡ್ಡಿ ಸಹೋದರರು ಈ ದೇಶವನ್ನು ಕಾಡುತ್ತಿರುವ ಶನಿಗಳು, ಇಂತಹ ಶನಿಗಳು ನಮ್ಮ ರಾಜ್ಯದ ಸಚಿವರಾಗಿ ಒಕ್ಕರಿಸಿರುವುದು ನಮ್ಮ ದೌರ್ಭಾಗ್ಯ ಎಂದು ಜರೆದಿದ್ದಾರೆ.

ಈ ರೆಡ್ಡಿ ಸಹೋದರರು ಅನಾಗರಿಕರು, ಸಂಸ್ಕೃತಿ ಇಲ್ಲದ ಅವರ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತದೆ. ಅದಿರು ಸಂಪತ್ತು ಲೂಟಿ ಮಾಡಿ ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಕಬಳಿಸುತ್ತಿರುವ ಇವರನ್ನು ನಮ್ಮ ಯಡಿಯೂರಪ್ಪ ಮಹಾಶಯರು ಇನ್ನು ಸಂಪುಟದಲ್ಲಿ ಯಾಕೆ
ಇರಿಸಿಕೊಂಡಿದ್ದಾರೆ ಎನ್ನುವುದು ತಿಳಿಯುವುದಿಲ್ಲ. ಸಂಸ್ಕೃತಿ ಇಲ್ಲದ ಈ ರೆಡ್ಡಿಗಳು ನನ್ನ ರಾಜಕೀಯ ಜೀವನದ ಬಗ್ಗೆ ಯಾವುದೇ ಸರ್ಟಿಫಿಕೇಟ್ ನೀಡುವುದು ಬೇಕಾಗಿಲ್ಲ ಅದಕ್ಕೆ ಅವರು ಯೋಗ್ಯರು ಅಲ್ಲ ಎಂದು ಸಿದ್ದು ಕಿಡಿಕಾರಿದ್ದಾರೆ.

ಅಧಿವೇಶನ ಮುಂದೂಡಿಕೆ

ಇಂದು ಆರಂಭಗೊಂಡ ಚಳಿಗಾಲದ ಅಧಿವೇಶನವನ್ನು ಡಿ.18 ರ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಮುಂದೂಡಲಾಗಿದೆ. ಇದಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಕೇಂದ್ರ ಮಾಜಿ ಸಚಿವ ಬಿ ಶಂಕರಾನಂದ, ರಾಜ್ಯದ ಮಾಜಿ ಸಚಿವ ಡಿಟಿ ಜಯಕುಮಾರ್ ಸೇರಿದಂತೆ ನೆರೆ ಪೀಡಿತ ಪ್ರದೇಶದಲ್ಲಿ ಮೃತರಾದವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶ್ರದ್ಧಾಂಜಲಿ ಅರ್ಪಿಸಿದರು. ವರ್ಷದಲ್ಲಿ ಅಧಿವೇಶನದ ಕಾಲಾವಧಿಯನ್ನು 60 ದಿನಗಳಿಗೆ ನಿಗದಿಪಡಿಸಿದ್ದರೂ ಈ ವರ್ಷ ಕೇವಲ 37 ದಿನಗಳು ಮಾತ್ರ ಅಧಿವೇಶನ ನಡೆಯವ ಸಾಧ್ಯತೆಯಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X