ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ ನಿಷೇಧಕ್ಕೆ ತಡೆ, ರೆಡ್ಡಿ ಕೊಂಚ ನಿರಾಳ

By Staff
|
Google Oneindia Kannada News

Reddy jubilant over AP High Court order
ಬೆಂಗಳೂರು, ಡಿ. 12 : ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂ ಮತ್ತು ಎಚ್ ಸಿದ್ಧಾಪುರ ಗ್ರಾಮಗಳಲ್ಲಿ ಓಬಳಾಪುರಂ ಮೈನಿಂಗ್ ಕಂಪನಿಯ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿ ಆಂಧ್ರಪ್ರದೇಶ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈದರಾಬಾದ್ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಸುಪ್ರಿಂಕೋರ್ಟ್ ನಿಂದ ನೇಮಕವಾದ ಕೇಂದ್ರ ಉನ್ನತಾಧಿಕಾರ ಸಮಿತಿ ಶಿಫಾರಸ್ಸಿನ ಮೇರೆಗೆ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿ ನವೆಂಬರ್ 25 ರಂದು ಆಂಧ್ರ ಸರಕಾರ ಆದೇಶ ಹೊರಡಿಸಿತ್ತು. ಹೊಸದಾಗಿ ಅದಿರು ತೆಗೆಯುವುದಷ್ಟೇ ಅಲ್ಲ. ಈ ಹಿಂದೆ ಸಂಗ್ರಹಣೆ ಮಾಡಿದ್ದ ಅದಿರು ಸಾಗಣೆಗೂ ನಿಷೇಧ ಹೇರಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಒಎಂಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ನ್ಯಾಯಾಲಯದ ಆದೇಶದಿಂದ ಒಎಂಸಿ ಮಾಲೀಕರಾದ ಸಚಿವ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಮತ್ತು ಶ್ರೀರಾಮುಲು ನಿಟ್ಟುಸಿರು ಬಿಡುವಂತಾಗಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿಲ್ ಆರ್ ದವೆ ಮತ್ತು ನ್ಯಾಯಮೂರ್ತಿ ಸಿ ವಿ ನಾಗಾರ್ಜುನ ರೆಡ್ಡಿ ಒಳಗೊಂಡ ವಿಭಾಗೀಯ ಪೀಠ, ಸರಕಾರದ ಆದೇಶದಲ್ಲಿ ಲೋಪವಿರುವುದು ಮೆಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಅಲ್ಲದೇ ತರಾತುರಿಯಲ್ಲಿ ಈ ಆದೇಶ ಹೊರಬಿದ್ದಿದೆ ಎಂದು ಅಭಿಪ್ರಾಯಪಟ್ಟಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X