ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಜುನಾಥನ ಆತ್ಮಕ್ಕೆ ಸ್ವಲ್ಪ ಶಾಂತಿ

By Staff
|
Google Oneindia Kannada News

Manjunath case: death penalty commuted to life-term
ಲಖನೌ, ಡಿ. 11 : ಇಂಡಿಯನ್ ಆಯಿಲ್ ಕಾರ್ಪೋರೇಷನ್ ನ ಸೇಲ್ಸ್ ಆಫೀಸರ್ ಕನ್ನಡಿಗ ಮಂಜುನಾಥ್ ಷಣ್ಮುಗಂ(27) ಅವರನ್ನು ಅಮಾನುಷವಾಗಿ ಹತ್ಯೆಗೈದಿದ್ದ ಆರೋಪಿಗಳಲ್ಲಿ ಆರು ಮಂದಿಗೆ ಅಲಹಾಬಾದ್ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಪ್ರಕರಣದಲ್ಲಿದ್ದ ಏಂಟು ಆರೋಪಿಗಳಲ್ಲಿ ಇಬ್ಬರು ನಿರಪರಾಧಿಗಳೆಂದು ನ್ಯಾಯಾಲಯ ಆದೇಶ ಹೊರಡಿಸಿದೆ.

ನ್ಯಾಯಾಮೂರ್ತಿ ಕೆಕೆ ಮಿಶ್ರಾ ಮತ್ತು ನ್ಯಾಯಮೂರ್ತಿ ಡಿ ವಿ ಶರ್ಮಾ ಅವರನ್ನು ಒಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಐಓಸಿ ಅಧಿಕಾರಿ ಮಂಜುನಾಥ ಅವರ ಹತ್ಯೆ ಅತ್ಯಂತ ಹೀನ ಕೃತ್ಯ ಎಂದಿರುವ ನ್ಯಾಯಾಲಯ, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯೇ ಸರಿ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಲಖೀಮ್ ಪುರ್ ಜಿಲ್ಲಾ ನ್ಯಾಯಾಲಯ 2007 ರ ಮಾರ್ಚ್ ತಿಂಗಳಲ್ಲಿ ಏಂಟು ಆಪರಾಧಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಪ್ರಕರಣದಲ್ಲಿ ಮೋನು ಮಿತ್ತಲ್ ಹಾಗೂ ಆತನ ಸಹಚರರ ವಿರುದ್ಧ 2006ರ ಫೆಬ್ರವರಿ 15 ರಂದು ನ್ಯಾಯಾಲಯಕ್ಕೆ ಚಾರ್ಜ್ ಸೀಟ್ ಸಲ್ಲಿಸಲಾಗಿತ್ತು.

ಮಂಜುನಾಥ್ ಷಣ್ಮುಗಂ ಮೂಲತಃ ಕನ್ನಡಿಗರು. ಲಖನೌ ಇಂಡಿಯನ್ ಇಸ್ಟಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದುಕೊಂಡ ಅವರು ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸೇವೆಯಲ್ಲಿ ಸೇರಿಕೊಂಡಿದ್ದರು. 2005ರ ನವೆಂಬರ್ 19 ರಂದು ಉತ್ತರ ಪ್ರದೇಶದ ಲಖೀಮ್ ಪುರ ಪಟ್ಟಣದ ಗೋರಕ್ ನಾಥ್ ಪ್ರದೇಶದಲ್ಲಿರುವ ಮೋನು ಮಿತ್ತಲ್ ಒಡೆತನದ ಮಿತ್ತಲ್ ಅಟೋಮೊಬೈಲ್ಸ್ ಗೆ ದಾಳಿ ನಡೆಸಿ ಅಕ್ರಮ ಕಲಬೆರಕೆ ಇಂಧನದ ಸ್ಯಾಂಪಲ್ ನ್ನು ತೆಗೆದುಕೊಂಡು ವಾಪಸ್ಸು ತೆರಳುತ್ತಿದ್ದಾಗ ಮೋನು ಮಿತ್ತಲ್ ಹಾಗೂ ಆತನ ಸಹಚರರು ಬೆನ್ನಟ್ಟಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ನ್ಯಾಯಾಲಯ ಆದೇಶಕ್ಕೆ ಪ್ರತಿಕ್ರಿಯಿಸಿರುವ ಮಂಜುನಾಥ ಸಹೋದರ ರಾಘವೇಂದ್ರ, ಅಲಹಾಬಾದ್ ನ್ಯಾಯಾಲಯ ನೀಡಿರುವ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ರಮ ದಂಧೆಯಲ್ಲಿ ಪಾಲ್ಗೊಂಡಿದ್ದ ಮೋನು ಮಿತ್ತಲ್ ಅಪರಾಧಿ ಎಂದು ಸಾಬೀತಾಗಿದೆ. ಈತನಿಗೆ ಮರಣದಂಡನೆ ಶಿಕ್ಷೆಯೇ ಸರಿಯಾಗಿತ್ತು ಎಂದಿದ್ದಾರೆ. ಏನೇ ಆಗಲಿ ನ್ಯಾಯಾಲಯ ನೀಡಿರುವ ತೀರ್ಪಿಗೆ ತಲೆಬಾಗುತ್ತೇವೆ. ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಆಗುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದ್ದು, ವಕೀಲರು ಮತ್ತು ಮಂಜುನಾಥ ಟ್ರಸ್ಟ್ ನ್ನು ಸಂಪರ್ಕಿಸಲಾಗುವುದು ಎಂದು ರಾಘವೇಂದ್ರ ವಿವರಿಸಿದರು.

ಮಂಜನಾಥ ಹತ್ಯೆ ನಂತರ ಅವರ ಕ್ಲಾಸ್ ಮೇಟ್ ಗಳು ಸೇರಿಕೊಂಡು ರಚಿಸಿಕೊಂಡಿರುವ ಮಂಜುನಾಥ ಟ್ರಸ್ಟ್ ನ ಸದಸ್ಯರೂ ಕೂಡಾ ಅಲಹಾಬಾದ್ ತೀರ್ಪಿಗೆ ವಿಷಾದಕರ ಎಂದು ಹೇಳಿದ್ದಾರೆ. ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಿದ ಅಧಿಕಾರಿಯನ್ನು ಬೆನ್ನಟ್ಟಿ ಗುಂಡಿಕ್ಕಿ ಕೊಲೆ ಮಾಡಿದ್ದು ತನಿಖೆಯಿಂದ ಸಾಬೀತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ, ಉಚ್ಚ ನ್ಯಾಯಾಲಯ ಶಿಕ್ಷೆಯನ್ನು ಪ್ರಮಾಣ ಕಡಿಮೆ ಮಾಡಿದೆ. ಯಾವ ಆಧಾರದ ಮೇಲೆ ಈ ತೀರ್ಪು ನೀಡಿದೆ. ಇದರ ಬಗ್ಗೆ ಸುಪ್ರಿಂಕೋರ್ಟ್ ಹೋಗುವ ಸಾಧ್ಯತೆಯನ್ನು ಮಂಜುನಾಥ ಟ್ರಸ್ಟ್ ನ ಸದಸ್ಯರು ತಿಳಿಸಿದ್ದಾರೆ. ಮಂಜುನಾಥ ಕೋಲಾರ ಜಿಲ್ಲೆಯವರಾಗಿದ್ದು, ಷಣ್ಮುಗಂ ಮತ್ತು ಪ್ರಮೀಳಾ ದಂಪತಿಗಳ ಮಗನಾಗಿದ್ದಾರೆ. ಷಣ್ಮುಗಂ ಕೂಡಾ ಐಓಸಿಯಲ್ಲಿ ನಿವೃತ್ತ ಅಧಿಕಾರಿಯಾಗಿದ್ದಾರೆ.

[About Manjunath : Manjunath Shanmugam was born on February 23rd, 1978. He was the oldest of three siblings and leaves behind his parents, a younger brother and sister. His father works in BEML in Kolar Gold Fields, a township about 100 km from Bangalore.

After finishing his engineering from SJCE Mysore, Manjunath completed his MBA from I.I.M Lucknow, and graduated in 2003. He joined IOCL during campus placements, and was the first sales officer to manage the Lakhimpur Khiri region of UP - a known hotbed of petroleum adulteration.

Manjunath was a terrific singer, full of verve and heart, part of the campus band - '3.4′. He was popular for his sincerity, honesty and friendliness. He was murdered on 19th November, 2005]

Courtesy : Manjunath Shanmugam Trust

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X