ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಭಿಕ್ಷುಕರ ಮುಕ್ತ ನಗರ ಬೆಂಗಳೂರು

By Staff
|
Google Oneindia Kannada News

Human Rights Day
ಬೆಂಗಳೂರು, ಡಿ.11: ಬೆಂಗಳೂರು ನಗರವನ್ನು ಬಾಲ ಭಿಕ್ಷುಕ ಮುಕ್ತ ನಗರವನ್ನಾಗಿ ಮಾಡಲು ಕರ್ನಾಟಕ ರಾಜ್ಯದ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗವು ಸಂಬಂಧಪಟ್ಟ ಇಲಾಖೆಗಳ ಜೊತೆ ಚರ್ಚೆ ನಡೆಸಿದೆ.

ಮಹಿಳಾ ಮಕ್ಕಳ ಕಲ್ಯಾಣ ಖಾತೆ ಸಚಿವ ಪಿ ನರೇಂದ್ರಸ್ವಾಮಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಪ್ರಸ್ತಾವಣೆಯನ್ನು ಸಲ್ಲಿಸಲಾಗುವುದು ಎಂದು ಮಕ್ಕಳ ಹಕ್ಕು ಸರಂಕ್ಷಣಾ ಆಯೋಗದ ಮುಖ್ಯಸ್ಥೆ ನೀನಾ ಪಿ ನಾಯಕ್ ಹೇಳಿದರು. ಈ ಯೋಜನೆಗೆ ಬಿಬಿಎಂಪಿ, ನಗರ ಪೊಲೀಸ್ ಇಲಾಖೆ ಸಹಕಾರ ಕೂಡ ಅಗತ್ಯ, ಬಾಲ ಭಿಕ್ಷುಕರನ್ನು ಪರಿವರ್ತಿಸಲು ಸಾಧ್ಯವಿದೆ ಎಂದು ನೀನಾ ಅವರು, ವಿಶ್ವ ಮಾನವ ಹಕ್ಕು ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.

ಕಾಯಿದೆ ಏನು ಹೇಳುತ್ತದೆ?
18 ವರ್ಷದೊಳಗಿನ ಬಾಲಕ ಹಾಗೂ ಬಾಲಕಿ ಭಿಕ್ಷುಕರಿಗೆ ಕರ್ನಾಟಕ ರಾಜ್ಯ ಬಿಕ್ಷುಕ ನಿಯಂತ್ರಣ ಕಾಯಿದೆ 1975 ಅನ್ವಯವಾಗುವುದಿಲ್ಲ.ಬಾಲ ಅಪರಾಧಿಗಳೆಂದು ಪರಿಗಣಿಸಿ ಮನಪರಿವರ್ತನೆಗೊಳಿಸಲು ಸರಿಯಾದ ಸೌಲಭ್ಯಗಳಿಲ್ಲ. ನಾಗರೀಕರಿಂದ ತೆರಿಗೆ ಸಂಗ್ರಹಿಸುವಲ್ಲಿ ಕಾಳಜಿವಹಿಸುವ ಬಿಬಿಎಂಪಿಯವರು, ವಯಸ್ಕ ಭಿಕ್ಷುಕರ ಅಭ್ಯುದಯಕ್ಕಾಗಿ ಬಳಕೆ ಮಾಡುತ್ತಿದೆ. ಆದರೆ, ಬಾಲ ಬಿಕ್ಷುಕ/ಕಿಯ ಸ್ಥಿತಿಗತಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸರ್ಕಾರಿ ಇಲಾಖೆಗಳು ಒಟ್ಟಾಗಿ ಸೇರಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು ಎಂದು ನೀನಾ ಹೇಳಿದರು.

ಬಳಸಿ: ಮಕ್ಕಳ ಆರೈಕೆ ಹಾಗೂ ಸಂರಕ್ಷಣೆಗಾಗಿ ಮಕ್ಕಳ ಸಹಾಯವಾಣಿ : 1098 ( 24 ಗಂಟೆ ಉಚಿತ ಕರೆ)

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X