ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ರಾಜ್ಯ : ಆತಂಕದಲ್ಲಿ ಕೆಸಿಆರ್ ಸ್ಥಿತಿ

By Staff
|
Google Oneindia Kannada News

K Chandrashekar Rao
ಹೈದರಾಬಾದ್, ಡಿ. 8 : ಕಳೆದ ಒಂದು ವಾರದಿಂದ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಅಮರಣ ಉಪವಾಸ ಸತ್ಯಾಗ್ರಹ ಆರಂಭಿಸಿ ಆನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಟಿಆರ್ ಎಸ್ ನಾಯಕ ಕೆ ಸಿ ಚಂದ್ರಶೇಖರ ರಾವ್ ಅವರ ದೇಹಸ್ಥಿತಿ ವಿಷಮಗೊಂಡಿದ್ದು, ಜೀವಕ್ಕೆ ಪ್ರಾಣಾಪಾಯ ಎದುರಾಗಿದೆ ಎಂದು ಎನ್ಐಎಂಎಸ್ ನಿರ್ದೇಶಕ ಡಾ. ಬಿ ಪ್ರಸಾದ್ ರಾವ್ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯಕ್ಕಾಗಿ ಉಪವಾಸ ಸತ್ಯಾಗ್ರಹವನ್ನು ಅವರು ಆಸ್ಪತ್ರೆಯಲ್ಲೂ ಮುಂದುವರೆಸಿದ್ದಾರೆ. ವೈದ್ಯರ ಚಿಕಿತ್ಸೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಅವರ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದರು. ಮುಂಜಾಗ್ರತಾ ಕ್ರಮವಾಗಿ ಕೆಸಿಆರ್ ಅವರಿಗೆ ಸಲೈನ್ ಮತ್ತು ನ್ಯೂಟ್ರಿಷಿನ್ ಗೆ ಸಂಬಂಧಿಸಿದ ಔಷಧಿಗಳನ್ನು ನೀಡಲಾಗುತ್ತಿದೆ. ಐವಿ ಪ್ಲೂಯಿಡ್ ಗಳನ್ನು ಹೆಚ್ಚು ನೀಡಿದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ ಅವರು ಹೈಪರ್ ಪ್ರೊಟೀನನೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂದರೆ, ರಕ್ತದಲ್ಲಿ ಪ್ರೋಟಿನ್ ಅಂಶ ಕಡಿಮೆಯಾಗಿ ಜೀವಕೋಶಗಳ ನಿಶಕ್ತವಾದಾಗ ಈ ಕಾಯಿಲೆ ಉಂಟಾಗುತ್ತದೆ. ಇದರಿಂದ ಮನುಷ್ಯ ಆನಾರೋಗ್ಯಕ್ಕೆ ಒಳಗಾಗುತ್ತಾನೆ ಎಂದು ಅವರು ವಿವರಿಸಿದರು.

ಸದ್ಯ ಕೆಸಿಆರ್ ಮಾಲ್ ನ್ಯೂಟ್ರಿಷನ್ ನಿಂದ ಬಳಲುತ್ತಿದ್ದಾರೆ. ಇದನ್ನು ಸರಿದೋಗಿಸಲು ಓರಲ್ ನ್ಯೂಟ್ರಿಷನ್ ಅಗತ್ಯ. ಕಳೆದ ವಾರದಿಂದ ರೋಗಿಗೆ ಆಹಾರ ಇಲ್ಲದಿರುವುದರಿಂದ ನಿಯಮಿತವಾಗಿ ಆಹಾರ ನೀಡಬೇಕಾಗುತ್ತದೆ. ಐವಿ ಪ್ಲೂಯಿಡ್ ಗಳನ್ನು ಸಂಪೂರ್ಣವಾಗಿ ಕೈಬಿಡಬೇಕಾಗಿದೆ. ಆದರೆ, ಅವರ ಚಿಕಿತ್ಸೆ ಸ್ಪಂದಿಸುತ್ತಿಲ್ಲ. ಜೊತೆಗೆ ಅವರಿಗೆ ಸಕ್ಕರೆ ಕಾಯಿಲೆ ಇರುವುದು ತೀವ್ರ ಸಮಸ್ಯೆಗೆ ಕಾರಣವಾಗಿದೆ ಎಂದು ಡಾ ಪ್ರಸಾದ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X