ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀಟನಾಶಕ ಎಂಡೋಸಲ್ಫಾನ್ ನಿಷೇಧವಿಲ್ಲ

By Staff
|
Google Oneindia Kannada News

No ban on Endosulfan pesticide
ನವದೆಹಲಿ, ಡಿ.5: ಸರ್ವಾಂತರ್ಯಾಮಿ ವಿಷ ಎಂದೇ ಹೆಸರಾಗಿರುವ ಎಂಡೋಸಲ್ಫಾನ್ ಕೀಟನಾಶಕವನ್ನು ನಿಷೇಧಿಸದಿರಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಕೀಟನಾಶಕದ ಮಿತವಾದ ಬಳಕೆಯಿಂದ ಕೆಲವು ಬೆಳೆಗಳಿಗೆ ಒಳ್ಳೆಯದಾಗುತ್ತಿದೆ. ಆದುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ರಾಜ್ಯಸಭೆಗೆ ಶುಕ್ರವಾರ ತಿಳಿಸಿದ್ದಾರೆ.

ಕೀಟನಾಶಕ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತಂತೆ ಅಧ್ಯಯನ ನಡೆಸಲು ನೇಮಕಗೊಂಡಿದ್ದ ಕೇರಳ ಮತ್ತು ಕೇಂದ್ರ ಸರಕಾರದ ತಜ್ಞರ ಸಮಿತಿ, ಎಂಡೋಸಲ್ಫಾನ್ ನಿಷೇಧಕ್ಕೆ ಶಿಫಾರಸು ಮಾಡಿಲ್ಲ ಎಂದು ಶರದ್ ಪವಾರ್ ವಿವರಣೆ ನೀಡಿದ್ದಾರೆ.

ಸರಕಾರ ಇದುವರೆಗೂ 27 ಕೀಟನಾಶಕಗಳನ್ನು ನಿಷೇಧಿಸಿದೆ. ಆದರೆ ಎಂಡೋ ಸಲ್ಫಾನ್ ಕೀಟನಾಶಕವನ್ನು ಮಾತ್ರ ನಿಷೇಧಿಸಿಲ್ಲ. ಚೀನಾ, ಅಮೆರಿಕ ಮತ್ತು ಬ್ರೆಜಿಲ್ ದೇಶಗಳಲ್ಲೂ ಇದನ್ನು ನಿಷೇಧಿಸಿಲ್ಲ . ಎಂಡೋ ಸಲ್ಫಾನ್ ಕೀಟನಾಶಕವನ್ನು ಅಗ್ರಿಸಲ್ಪಾನ್, ಅಫಿಡಾನ್, ಐಕಿಡೋ, ಅಲೋದಾನ್, ಎಂಡೋಫಾನ್, ಎಂಡೋ ಫ್ಲೋ, ಥಿಯೋನೇಟ್, ವೆಲ್ಡೋಸಲ್ಫಾನ್... ಎಂಬ ಹಲವಾರು ಹೆಸರುಗಳಲ್ಲಿ ಕರೆಯಲಾಗುತ್ತದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X