ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಇಟಿ ಉಗ್ರ ನಾಜಿರ್ ಕಸ್ಟಡಿ ಮುಂದುವರಿಕೆ

By Staff
|
Google Oneindia Kannada News

LeT militant Nazir Parwan
ಬೆಂಗಳೂರು, ಡಿ. 5 : 2008 ಜುಲೈ 25ರಂದು ಕರ್ನಾಟಕದ ರಾಜಧಾನಿಯಲ್ಲಿ ಜರುಗಿದ ಸರಣಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದಾನೆನ್ನಲಾದ ಲಷ್ಕರ್-ಇ-ತೊಯ್ಬಾದ ಶಂಕಿತ ಉಗ್ರ ನಾಜಿರ್ ಪರ್ವನ್ (25) ಮತ್ತು ಆತನ ಸಹಚರ ಶಫೀಕ್ ಅಲಿಯಾಸ್ ಶಫಾಜ್ ಶಂಶುದ್ದಿನ್ ನನ್ನು ಮ್ಯಾಜಿಸ್ಟ್ರೇಟ್ ಮುಂದೆ ಇಂದು ಹಾಜರುಪಡಿಸಲಾಯಿತು. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಭಾರತ ಮತ್ತು ಬಾಂಗ್ಲಾ ದೇಶದ ಗಡಿಯಲ್ಲಿರುವ ಮೇಘಾಲಯದಲ್ಲಿ ಬಂಧಿಸಲಾಗಿದ್ದ ಅವರಿಬ್ಬರನ್ನು ವಿಶೇಷ ವಿಮಾನದ ಮುಖಾಂತರ ಇಲ್ಲಿಗೆ ಕರೆತರಲಾಗಿತ್ತು. ಬಾಂಬ್ ತಯಾರಿಕಾ ನಿಪುಣನಾಗಿರುವ ನಾಜಿರ್ ಮತ್ತು ಶಫೀಕ್ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಆ ಸರಣಿ ಸ್ಫೋಟದಲ್ಲಿ ಓರ್ವ ಮಹಿಳೆ ಹತರಾಗಿದ್ದರು. ಆದರೆ, 2005ರಲ್ಲಿ ಟಾಟಾ ಇನ್ ಸ್ಟಿಟ್ಯೂಟ್ ಮೇಲೆ ನಡೆದ ದಾಳಿಯನ್ನು ಭಾಗಿಯಾಗಿರುವುದನ್ನು ಅಲ್ಲಗಳೆದಿದ್ದಾರೆ.

ದಕ್ಷಿಣ ಭಾರತದಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಗಾಗಿ ಯುವಕರನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಕೇರಳ ಮೂಲದ ನಾಜಿರ್ ಮತ್ತು ಶಫೀಕ್ ಹೊತ್ತುಕೊಂಡಿದ್ದಾರೆ. ಬೆಂಗಳೂರಿನಲ್ಲಿಯೂ ಇವರಿಬ್ಬರು ಅನೇಕ ಯುವಕರನ್ನು ಭೇಟಿ ಮಾಡಿ ಎಲ್ಇಟಿ ಸೇರಲು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ವಿಚಾರಣೆಯಲ್ಲಿ, ಸರಣಿ ಸ್ಫೋಟಕ್ಕಾಗಿ ಅನೇಕ ಸ್ಥಳೀಯರ ನೆರವನ್ನು ಪಡಿದಿದ್ದನ್ನು ಒಪ್ಪಿಕೊಂಡಿದ್ದಾರೆ. ಸ್ಫೋಟಕ್ಕೂ ಮೊದಲು ನಗರದ ಅನೇಕ ಭಾಗಗಳಲ್ಲಿ ವಾಸವಾಗಿದ್ದುದಾಗಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X