ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವತ್ತಿನ ಚಿನ್ನದ ಬೆಲೆ ತಿಂಗಳ ಸಂಬಳ!

By Staff
|
Google Oneindia Kannada News

Gold prices surge to Rs 18,400 in opening trade
ನವದೆಹಲಿ, ಡಿ. 2 : ಚಿನ್ನದ ಬೆಲೆ ಏರಿಕೆಯ ಸವಾರಿ ನಾಗಾಲೋಟದಲ್ಲಿ ಮುಂದುವರೆದಿದೆ. ಜನಸಾಮಾನ್ಯರಿಗೆ ಮೊದಲೇ ಗಗನಕುಸುಮ ಎನಿಸಿದ್ದ ಬಂಗಾರದ ದರಗಳನ್ನು ಈಗ ಮರೀಚಿಕೆ ಎಂದು ಬಣ್ಣಿಸಬಹುದಾದ ಪರಿಸ್ಥಿತಿ ಉಂಟಾಗಿದೆ. ರಾಜಧಾನಿ ನವದೆಹಲಿಯಲ್ಲಿ ಇಂದಿನ ಮಾರುಕಟ್ಟೆಯ ದರ 10 ಗ್ರಾಮ್ ಗೆ 18,400 ರುಪಾಯಿಗಳು. ಬಂಗಾರ ಮಾರುಕಟ್ಟೆಯ ಇತಿಹಾಸದಲ್ಲೇ ಈ ಬೆಲೆ ಅತ್ಯಧಿಕ ಎಂದು ಚಿನಿವಾರ ಪೇಟೆ ಹೇಳುತ್ತಿದೆ. ಇಷ್ಟಿದ್ದರೂ ಬೆಂಗಳೂರಿನಲ್ಲಿರುವ ಚಿನ್ನದಂಗಡಿಗಳು ಗಿಜಿಗುಟ್ಟುವುದೇನು ನಿಂತಿಲ್ಲ. ಯಾಕೇಂತ?

ಬೆಲೆ ಏರಿಕೆ ತಲೆನೋವಾಗಿದ್ದರೂ ಮದುವೆ ಯಾರಪ್ಪನ ಮನೇದು. ಬೆಳ್ಳಿಕಾಲುಂಗುರದ ಜತೆಗೆ ಕನಿಷ್ಠ ತಾಳಿ, ಒಂದು ಜತೆ ಓಲೆ, ಮೂಗುತಿ ಬೇಕಲ್ಲ. ಮದುವೆ ಮಾತ್ರವಲ್ಲ, ಕೌಟುಂಬಿಕ ಮಂಗಳ ಕಾರ್ಯಕ್ರಮಗಳಲ್ಲಿ ಭರದಲ್ಲಿ ಚಿನ್ನದ ಕೊಡುಕೊಳ್ಳುವಿಕೆ ಹೆಚ್ಚಾಗಿದ್ದು, ಬಂಗಾರದ ಬೆಲೆ ಗಗನಕ್ಕೇರಿದರೂ ಮಾರಾಟ ಗತಿ ಮಾತ್ರ ಇಳಿಕೆ ಕಂಡಿಲ್ಲ. ಇದೇ ಕಾರಣದಿಂದಾಗಿ ಬೆಲೆ 18,400 ರುಪಾಯಿ ಆಗಿದೆ. ತಿಂಗಳ ಪಗಾರ ಪೂರ್ತಿ ಕೊಟ್ಟರೂ ಒಂದು ಉಂಗುರ ಕೊಳ್ಳುವುದು ತ್ರಾಸ ಅದ.

ಬೆಲೆ ಏರಿಕೆಗಳ ಈ ಯುಗದಲ್ಲಿ ಮನುಷ್ಯನ ಬೆಲೆ ಬಿಟ್ಟು ಇನ್ಯಾವುದಕ್ಕೂ ಬೆಲೆ ಕಡಿಮೆ ಆಗುವುದಿಲ್ಲ ಎನ್ನುವುದು ನಮಗೂ ಖಾತ್ರಿ, ನಿಮಗೂ ಖಾತ್ರಿ. ಬೆಲೆ ಕಡಿಮೆಯಾಗಿದೆ ಒಂದು ಕೆಜಿ ಕೊಳ್ಳುವ ಕಡೆ ಎರಡು ಕೆಜಿ ಕೊಂಡೆ ಎಂಬ ಯಾವುದಾದರೂ ಉದಾಹರಣೆ ಇದ್ದರೆ ನಮಗೆ ತಿಳಿಸಿ. ಬಂಗಾರದ ಬೆಲೆ ಕೇಳಿದಾಕ್ಷಣ ಜನಸಾಮಾನ್ಯರ ಪ್ರತಿಕ್ರಿಯೆ ಹೇಗಿರುತ್ತದೆ ಎಂದರೆ, 'ಆಯ್ಯೋ ಬಿಡ್ರಿ ನಾವೆಲ್ಲಿ ತಗೋಳ್ಳೋಣಾ, ಎಷ್ಟಾದರೂ ಆಗ್ಲಿ ಬಿಡಿ' ಎಂಬ ಧ್ವನಿಯಲ್ಲಿ ಹೇಳುತ್ತಾರೆ. ಆದರೆ, ನಾಳೆ ಪ್ರಿಯತಮೆಗೆ ಉಂಗುರ ಅಥವಾ ಮಗಳ ಮದುವೆಗೆ ತಾಳಿ ಖರೀದಿಸುವ ಆಲೋಚನೆ ಬಂದು ಬೆಚ್ಚಿ ಬೀಳುತ್ತಾರೆ.

ಈ ಮಧ್ಯೆ, ನಮ್ಮ ರಾಜಾಪೇಟೆ ಸ್ನೇಹಿತ ವೀರಾಚಾರಿ ಹೇಳುವ ಪ್ರಕಾರ, ಬಂಗಾರದ ಬೆಲೆ ಇಳಿಯುವ ಯಾವ ಲಕ್ಷಣಗಳೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಜಾಗತಿಕ ಆರ್ಥಿಕ ಬಿಕ್ಕಟ್ಟು, ಮಾರುಕಟ್ಟೆ ಕುಸಿತ, ಉದ್ಯೋಗ ನಷ್ಟ, ಜತೆಗೆ ಉರಿಯುವ ಬೆಂಕಿಗೆ ತುಪ್ಪ ಸುರಿದ ದುಬೈ ಆರ್ಥಿಕ ಕುಸಿತಗಳಿಂದ ಮಾರುಕಟ್ಟೆ ಚೇತರಿಸಿಕೊಳ್ಳುವವರಿಗೆ ಚಿನ್ನದ ಬೆಲೆ ಇಳಿಯುವುದಿಲ್ಲ. ತಾತ್ಪಾರ್ಯವೆಂದರೆ ಕೊಳ್ಳುವುದು ಕಷ್ಟ, ಮಾರುವುದು ಅನಿವಾರ್ಯ. ಈ ಎಲ್ಲದರ ಪರಿಣಾಮ, ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಇದು ಇದೇ ರೀತಿ ಮುಂದುವರೆದರೆ, ಮುಂದಿನ ನಾಲ್ಕು ವರ್ಷಗಳಲ್ಲಿ ಬಂಗಾರದ ಬೆಲೆ 10 ಗ್ರಾಮ್ ಗೆ ರು. 30 ಸಾವಿರವಾದರೆ ಆಶ್ಚರ್ಯವಿಲ್ಲ.

ನೀತಿ :
ಬಂಗಾರದೊಡವೆ ಬೇಕೇ ನೀರೇ, ಎಂದು ಹಾಡುವ ಹಾಗಿಲ್ಲ. ನಿರಾಭರಣ ಸುಂದರಿಯರಿಗಿದು ಕಾಲವಯ್ಯ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X