ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗವಿಕಲರಿಗೆ ವಿದ್ಯುತ್ ಚಾಲಿತ ಗಾಲಿ ಕುರ್ಚಿ

By Staff
|
Google Oneindia Kannada News

Ostrich mobility wheel chairs for disabled
ಬೆಂಗಳೂರು, ಡಿ.1 : ಗಾಲಿ ಕುರ್ಚಿಯನ್ನು ಬಳಸುವ ಅಂಗವಿಕಲರಿಗೆ ಸಿಹಿಸುದ್ದಿ. ವಿಶ್ವ ಅಂಗವಿಕಲರ ದಿನಾಚರಣೆ (ಡಿ.3) ಹತ್ತಿರ ಬರುತ್ತಿರುವಾಗಲೇ ಈ ಸುದ್ದಿ ಕೇಳಿಬರುತ್ತಿರುವುದು ಇನ್ನೂ ಸಂಸತದ ಸುದ್ದಿ. ನಮ್ಮ ಅನೇಕ ಅಂಗವಿಕಲ ಮಿತ್ರರಿಗೆ ಸುಲಭವಾಗಿ ಚಲಿಸುವುದಕ್ಕೆ ಸಾಧ್ಯವಾಗುವ ಗಾಲಿಕುರ್ಚಿಗಳು ಲಭ್ಯವಿರುವುದಿಲ್ಲ. ಲಭ್ಯವಿದ್ದರೂ ನಮ್ಮ ದೇಶದ ಬಹುಪಾಲು ರಸ್ತೆಗಳು ಆ ಕುರ್ಚಿಗಳ ಸುಸೂತ್ರ ಚಲನೆಗೆ ಹೇಳಿಮಾಡಿಸಿರುವುದಿಲ್ಲ.

ಈ ಕೊರತೆಯನ್ನು ಮನಗಂಡ ಆಸ್ಟ್ರಿಚ್ ಮೊಬಿಲಿಟಿ ಇನ್ ಸ್ಟ್ರುಮೆಂಟ್ಸ್ ಕಂಪನಿ, ಅಂಗವಿಕಲರಿಗಾಗಿ ವಿಶೇಷ ವಿದ್ಯುತ್ ಚಾಲಿತ ಗಾಲಿ ಕುರ್ಚಿಗಳನ್ನು ಬಿಡುಗಡೆ ಮಾಡಿದೆ. ಅಡ್ಡಾದಿಡ್ಡಿವಾಗಿರುವ ಭಾರತದ ರಸ್ತೆಗಳ ಸ್ವಭಾವವನ್ನು ಗಮನದಲ್ಲಿಟ್ಟುಕೊಂಡೇ ಈ ಕುರ್ಚಿಗಳನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ವಿನ್ಯಾಸ ಮತ್ತು ಅನುಕೂಲಗಳನ್ನು ಹೊಂದಿರುವ ಈ ಕುರ್ಚಿಗಳ ಕನಿಷ್ಠ ಬೆಲೆ 39,000 ರೂಪಾಯಿ.

ಕುರ್ಚಿಗಳಲ್ಲಿ ಅನೇಕ ಮಾಡೆಲ್ಲುಗಳಿರುತ್ತವೆ. 39 ಸಾವಿರದಿಂದ ಒಂದೂವರೆ ಲಕ್ಷ ರೂಪಾಯಿ ತನಕ ನಾಕಾರು ಬಗೆಯ ಕುರ್ಚಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಎಂಟು ಗಂಟೆಗಳ ಕಾಲ ಪೂರ್ಣ ಛಾರ್ಜ್ ಮಾಡಿಟ್ಟುಕೊಂಡರೆ 15 ರಿಂದ 20 ಕಿಲೋಮೀಟರ್ ವರೆಗೆ ಮೋಟಾರು ಶಕ್ತಿ ಬಾಳಿಕೆ ಬರುತ್ತದೆ. ಆಸ್ಟ್ರಿಚ್ ಬಿಡುಗಡೆ ಮಾಡಿರುವ ಬೇಸಿಕ್ ಮಾಡೆಲ್ ವಿದ್ಯುತ್ ಗಾಲಿ ಕುರ್ಚಿಯ ಹೆಸರು ಫ್ಯಾಮೊ.

ಭಾರತದ ಹೆಸರಾಂತ ಗಾಲಿ ಕುರ್ಚಿ ಟೆನಿಸ್ ಆಟಗಾರ ಬೊನಿಫೇಸ್ ಪ್ರಭು ಆಸ್ಟ್ರಿಚ್ ಕಂಪನಿಯ ಬ್ರಾಂಡ್ ರಾಯಭಾರಿ. ಅವರೇ ಈ ಕುರ್ಚಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಹೇಳಿದ್ದೇನೆಂದರೆ "ಇಷ್ಟು ಅನುಕೂಲಗಳಿರುವ ಕುರ್ಚಿಯನ್ನು ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ. ಅಂಗವಿಕಲರು ಮತ್ತು ವೃದ್ಧರಿಗೆ ಇದೊಂದು ಅಭಿಮಾನದ ಬಳವಳಿಯಾಗಿದೆ. ಈ ಕುರ್ಚಿಯನ್ನು ಬಳಸುವುದರಿಂದ ಚಲಿಸುವ ಸ್ವಾತಂತ್ರ ಇಮ್ಮಡಿಯಾಗುವುದಲ್ಲದೆ ಯಾರ ನೆರವೂ ಇಲ್ಲದೆ ಓಡಾಡಬಹುದಾಗಿರುವುದು ಹೆಮ್ಮೆಯ ವಿಷಯ".

ಫ್ಯಾಮೋ ಗಾಲಿ ಕುರ್ಚಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ನಮ್ಮ ಸರಕಾರಗಳು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದೂ ಪ್ರಭು ವಿನಂತಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X