ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮೊಬೈಲ್ ರಿಂಗಣಿಸಬೇಕೆ ? ಹೀಗೆ ಮಾಡಿ

By Staff
|
Google Oneindia Kannada News

Starting tomorrow, mobile phones without IMEI will go useless
ನವದೆಹಲಿ, ನ. 30 : ಏಕರೂಪದ ಐಎಂಇಐ ಸಂಖ್ಯೆ ಹೊಂದಿಲ್ಲದ ಕೋಟ್ಯಂತರ ಮೊಬೈಲ್ ಗಳು ಇಂದು ಮಧ್ಯರಾತ್ರಿಯಿಂದ ನಿರುಪಯೋಗಿ ಆಗಲಿವೆ. ಅಂತರಾಷ್ಟ್ರೀಯ ಮೊಬೈಲ್ ಸಾಧನಗಳನ್ನು ಐಎಂಇಐ ಸಂಖ್ಯೆ ಮೂಲಕ ಗುರುತಿಸಲಾಗುತ್ತದೆ. 15 ಅಂಕೆಗಳ ಐಎಂಇಐ ಸಂಖ್ಯೆ ಯನ್ನು ನವೆಂಬರ್ 30ರ ಒಳಗೆ ಪಡೆಯಲು ಸರಕಾರ ಈ ಹಿಂದೆ ಗಡುವು ನೀಡಿತ್ತು. ಉಗ್ರರ ವಿಧ್ವಂಶಕ ಕೃತ್ಯಕ್ಕೆ ಮೊಬೈಲ್ ಗಳನ್ನೂ ಬಳಸುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ.

ಒಂದು ಅಂದಾಜಿನ ಪ್ರಕಾರ ಐಎಂಇಐ ಸಂಖ್ಯೆ ಹೊಂದಿರದ ಎರಡೂವರೆ ಕೋಟಿ ಮೊಬೈಲ್ ಗಳು ದೇಶದಲ್ಲಿವೆ. ಈ ಸಂಖ್ಯೆಯಿಂದ ಮೊಬೈಲ್ ಮಾದರಿ, ಸಂಖ್ಯೆ ಮತ್ತು ಆ ಸಾಧನ ತಯಾರಕರ ವಿವರಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ಪತ್ತೆ ಹಚ್ಚುವುದು ಹೇಗೆ : ನಿಮ್ಮ ಮೊಬೈಲ್ ನಿಂದ *#06 # ಪ್ರೆಸ್ ಮಾಡಿ. ಆಗ 15 ಡಿಜಿಟ್ ಗಳ ಐಎಂಇಐ ಸಂಖ್ಯೆ ಡಿಸ್ ಪ್ಲೇ ಆಗುತ್ತದೆ. ನೈಜ ಐಎಂಇಐ ಸಂಖ್ಯೆ 15 ಡಿಜಿಟ್ ಗಳನ್ನೂ ಹೊಂದಿರುತ್ತದೆ. ಈ ಸಂಖ್ಯೆ ನೈಜತೆಯಾಗಿರದಿದ್ದ ಪಕ್ಷದಲ್ಲಿ 57886 ಗೆ ಆ ಸಂಖ್ಯೆಯನ್ನು ಎಸ್ ಎಂ ಎಸ್ ಮೂಲಕ ಕಳುಹಿಸಿ. ನಂತರ ಎಸ್ ಎಂ ಎಸ್ ಉತ್ತರ ಬರುತ್ತದೆ. ಮೂಲ ಐಎಂಇಐ ಸಂಖ್ಯೆ, ಮಾಡೆಲ್ ಸಂಖ್ಯೆ ಮುಂತಾದವು ಲಭ್ಯವಾಗುತ್ತದೆ. ಒಂದು ಪಕ್ಷ ಲಭ್ಯವಾಗದಿದ್ದಲ್ಲಿ ನೀವು ಮೊಬೈಲ್ ಖರೀದಿಸಿದ ಡೀಲರ್ ಅನ್ನು ತಕ್ಷಣ ಸಂಪರ್ಕಿಸಿ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X