ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ

By Staff
|
Google Oneindia Kannada News

Anant Hegde Ashisara
ಶಿವಮೊಗ್ಗ, ನ.28:ಕೊಡಚಾದ್ರಿ ಮತ್ತು ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ವಿವರ ನೀಡುತ್ತಿದ್ದರು.

ಕೊಡಚಾದ್ರಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಗಣಿಗಾರಿಕೆ ಪುನರಾರಂಭ ಆಗಲಿದೆ ಎಂಬ ಸುದ್ದಿ ಕಪೋಲಕಲ್ಪಿತವಾಗಿದ್ದು, ಅರಣ್ಯ, ಪರಿಸರ ಮತ್ತು ಗಣಿ ಇಲಾಖೆಗಳೂ ಕೂಡ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದವರು ಹೇಳಿದರು. ಈ ಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯ ವಿಷಯ ಸದ್ಯ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ತೀರ್ಪು ಹೊರಬಂದ ನಂತರ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಫಿರ್ಯಾದುದಾರರು ನ್ಯಾಯಾಲಯದಲ್ಲಿ ಸದರಿ ಪ್ರದೇಶದಲ್ಲಿ ಈಗಾಗಲೇ ತೆಗೆದಿರಿಸಲಾಗಿದ್ದ 2 ಲಕ್ಷ ಟನ್ ಅದಿರನ್ನು ಸಾಗಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ವಾಸ್ತವದಲ್ಲಿ ಪರಿಸರವಾದಿಗಳು ಹೇಳುವಂತೆ ಇತ್ತೀಚಿನ ಭಾರೀ ಮಳೆಯಿಂದಾಗಿ ಇರಬಹುದಾದ ಅದಿರು ಇನ್ನಿಲ್ಲದಂತೆ ಕೊಚ್ಚಿಹೋಗಿದೆ ಎಂದವರು ಹೇಳಿದರು.

ಮೂಕಾಂಬಿಕ ಅಭಯಾರಣ್ಯ ಸೂಕ್ಷ್ಮ ಪ್ರದೇಶವಾಗಿದ್ದು, ಶರಾವತಿ ಕಣಿವೆ ಪರಿಸರ ಅಧ್ಯಯನದ ವರದಿಯು ಕೂಡ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದು ತರವಲ್ಲ ಎಂದಿದೆ ಎಂದರು. ಅರಣ್ಯ, ಪರಿಸರ, ವನ್ಯ ಪ್ರಾಣಿಗಳ ಸಂರಕ್ಷಣೆ ಕುರಿತು ಪ್ರಾವಿಣ್ಯತೆ ಪಡೆದ ವಿಶೇಷ ವಿಜ್ಞಾನಿಗಳನ್ನು ಕರೆಸಿ ಪಶ್ಚಿಮ ಘಟ್ಟ - ಪ್ರದೇಶದ ಅಧ್ಯಯನ ನಡೆಸಿ, ಡಿಸೆಂಬರ್ 2ನೇ ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದರು. ಪಶ್ಚಿಮಘಟ್ಟ ನದಿಕಣಿವೆ ವಿಷಯದಲ್ಲೂ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರಗಳ ಸಂಸದರ ಸಭೆ ಕರೆದು ಅವರ ಸಲಹೆ - ಸೂಚನೆಯನ್ನು ಪಡೆಯುವಂತೆ ಕೇಂದ್ರದ ಅರಣ್ಯ ಹಾಗೂ ಪರಿಸರ ಮಂತ್ರಿಗಳನ್ನು ಅವರು ಒತ್ತಾಯಿಸಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X