ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲದ ಸುಳಿಯಲ್ಲಿ ಐಷಾರಾಮಿ ದುಬೈ!

By Staff
|
Google Oneindia Kannada News

Anand Sharma
ಮುಂಬೈ ನ 28 : ದುಬೈನ ಸರಕಾರದ ವ್ಯವಹಾರ ಮತ್ತು ಇತರ ಯೋಜನೆಗಳ ನಿರ್ವಹಣೆ ಹಾಗು ಉಸ್ತುವಾರಿ ನೋಡಿಕೊಳ್ಳುತ್ತಿರುವ ಸರಕಾರದ ಅಧೀನದ 'ದುಬೈ ವರ್ಲ್ಡ್' ಮತ್ತು ರಿಯಲ್ ಎಸ್ಟೇಟ್ ಕಂಪನಿ 'ನಖಿಲ್'; ಬೃಹತ್ ಮೊತ್ತದ ಸಾಲಗಾರ ಕಂಪೆನಿಗಳಾಗಿ ಮಾರ್ಪಟ್ಟಿದೆ. ಈ ಹಿನ್ನಲೆಯಲ್ಲಿ ತೈಲ ಸಂಪದ್ಭರಿತ ದುಬೈ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು ಅಂದಾಜು ಸುಮಾರು 27,7300 ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿದೆ. ಸಂಕಷ್ಟದಲ್ಲಿ ಸಿಲುಕಿರುವ ದುಬೈ ಸರಕಾರ ಮರು ಪಾವತಿಗೆ ಕನಿಷ್ಟ ಆರು ತಿಂಗಳ ಕಾಲಾವಕಾಶ ಕೋರಿದೆ.

ಅರಬ್ ಗಣರಾಜ್ಯದ ಏಳು ಪ್ರಾಂತ್ಯಗಳ ಪೈಕಿ ಪ್ರಮುಖವಾಗಿರುವ ದುಬೈ, ಶೇಖ್ ವಂಶಸ್ಥರ ಪ್ರತ್ಯೇಕ ರಾಜಾಡಳಿತ ಹಾಗು ಬಜೆಟ್ ಹೊಂದಿದೆ. ಆದರೆ ಭದ್ರತೆ, ವಲಸೆ, ವಿದೇಶಾಂಗ ನೀತಿ ಸಮಾನವಾಗಿದೆ. 1950 ರಿಂದ ದುಬೈನ ಆರ್ಥಿಕತೆ ತೈಲ ಮಾತ್ರವಲ್ಲದೆ ಬಂದರು, ವ್ಯಾಪಾರ ಹಣಕಾಸು ಸೇವೆ ಮುಂತಾದ ನಾನಾ ಕ್ಷೇತ್ರಗಳಿಗೆ ಹರಡಿತು. ಆದರೆ ಕಳೆದೊಂದು ದಶಕದಿಂದ ರಿಯಲ್ ಎಸ್ಟೇಟ್ , ನಿರ್ಮಾಣ ಮತ್ತು ಪ್ರವಾಸೋಧ್ಯಮದಲ್ಲಿ ಸಿಕ್ಕಾಪಟ್ಟೆ ಹೂಡಿಕೆ ನಡೆಯಿತು. ಆದರೆ ಆರ್ಥಿಕ ಹಿಂಜರಿತದಿಂದ ರಿಯಲ್ ಎಸ್ಟೇಟ್, ನಿರ್ಮಾಣ, ಪ್ರವಾಸೋಧ್ಯಮ ಕೂಡ ಕುಸಿದಿರುವುದರಿಂದ ಸಾಲ ಮರುಪಾವತಿಗೆ ದುಬೈ ವರ್ಲ್ಡ್ ಗೆ ಕಷ್ಟವಾಗಿದೆ.

ದುಬೈ ವರ್ಲ್ಡ್ ಬಿಕ್ಕಟ್ಟನ್ನು ಸರಿಪಡಿಸುವ ಭರವಸೆ ನೀಡಿರುವ ಸರಕಾರ ಮೊದಲ ಹಂತದಲ್ಲಿ 59 ಶತಕೋಟಿ ಡಾಲರ್ ಮರು ಪಾವತಿಗೆ ಕನಿಷ್ಟ ಮೇ 30 , 2010ರ ತನಕ ಕಾಲಾವಕಾಶ ಬೇಕೆಂದು ಹೇಳಿದೆ. ದುಬೈ ಬಿಕ್ಕಟ್ಟು ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂದು ವಾಣಿಜ್ಯ ಸಚಿವ ಆನಂದ್ ಶರ್ಮಾ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ನಡುವೆ ಶುಕ್ರವಾರ (ನ 27) ಮುಂಬೈ ಶೇರು ಪೇಟೆ 634.16ಪಾಯಿಂಟ್ ಗಳ ಅಥವಾ ಶೇ. 3.78ರಷ್ಟು ನಷ್ಟ ಅನುಭವಿಸಿತು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X