ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರದ ನಾಡಿಗೆ ಒಲಿದ 'ಲಕ್ಷ್ಮಿ' ಕಟಾಕ್ಷ

By Staff
|
Google Oneindia Kannada News

BSY with ArcelorMittal team
ಬೆಂಗಳೂರು, ನ. 28: ನೆರಹಾವಳಿಯಿಂದ ತತ್ತರಿಸಿರುವಉತ್ತರಕರ್ನಾಟಕದ ಪ್ರಮುಖ ಜಿಲ್ಲೆಗಳಿಗೆ ಲಕ್ಷ್ಮಿ ಕಟಾಕ್ಷ ದೊರೆಯಲಿದೆ. ಜಾಗತಿಕವಾಗಿ ಕಬ್ಬಿಣ ಮತ್ತು ಉಕ್ಕು ಉತ್ಪಾದನೆಯಲ್ಲಿ ಮೊದಲಸ್ಥಾನದಲ್ಲಿರುವ ಲಕ್ಷ್ಮಿನಾರಾಯಣ ಮಿತ್ತಲ್ ಮಾಲೀಕತ್ವದ ಆರ್ಸೆಲರ್ ಮಿತ್ತಲ್ ಕಂಪೆನಿ ತನ್ನ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸಲಿದೆ.

ಹತ್ತು ಸಾವಿರ ಮಂದಿಗೆ ಉದ್ಯೋಗ ಅವಕಾಶ ಒದಗಿಸುವ ಹಾಗೂ 50 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಉಕ್ಕು ಕಾರ್ಖಾನೆಯನ್ನು
ರಾಜ್ಯದಲ್ಲಿ ಸ್ಥಾಪಿಸಲು ಆರ್ಸೆಲರ್ ಮಿತ್ತಲ್ ಗ್ರೂಪ್ ಮುಂದಾಗಿದೆ. ಈ ಸಂಬಂಧ ಮಿತ್ತಲ್ ಗ್ರೂಪ್‌ನ ಆಡಳಿತ ಮಂಡಳಿಯ ಮುಖ್ಯಸ್ಥ ಸುಧಿರ್ ಮಹೇಶ್ವರಿ ಮತ್ತು ಭಾರತ-ಚೀನಾ ದೇಶಗಳಿಗೆ ಗ್ರೂಪ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್ ಮತ್ತಿತರರು ಮುಖ್ಯಮಂತ್ರಿ
ಯಡಿಯೂರಪ್ಪ ಅವರೊಂದಿಗೆ ಗೃಹ ಕಚೇರಿ ಕೃಷ್ಣಾ'ದಲ್ಲಿ ಶುಕ್ರವಾರ ಸಮಾಲೋಚಿಸಿದರು.

ವಾರ್ಷಿಕ ಆರು ಮಿಲಿಯನ್ ಟನ್ ಉಕ್ಕು ತಯಾರಿಸಲು ಮಿತ್ತಲ್ ಗ್ರೂಪ್ ನಿರ್ಧರಿಸಿದ್ದು, ಜತೆಗೆ 750 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಘಟಕವನ್ನೂ ಸ್ಥಾಪಿಸಲಿದೆ. ಮೊದಲ ಹಂತದಲ್ಲಿ 30 ಸಾವಿರ ಹಾಗೂ ಎರಡನೇ ಹಂತದಲ್ಲಿ 20ಸಾವಿರ ಕೋಟಿ ರೂ. ಬಂಡವಾಳ ಹೂಡಲು ಕಂಪನಿ ತೀರ್ಮಾನಿಸಿದೆ.

ಕಾರ್ಖಾನೆ ಸ್ಥಾಪನೆಗಾಗಿ ಬಳ್ಳಾರಿ, ರಾಯಚೂರು, ಹೊಸಪೇಟೆ ಹಾಗೂ ಕೊಪ್ಪಳದಲ್ಲಿ ಸ್ಥಳ ಪರಿಶೀಲನೆ ನಡೆದಿದೆ. ಎಲ್ಲಿ ಕಾರ್ಖಾನೆ ಸ್ಥಾಪಿಸಬೇಕು ಎಂಬ
ಬಗ್ಗೆ ಮುಂದಿನ ತಿಂಗಳ ವೇಳೆಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುಧೀರ್ ಮಹೇಶ್ವರಿ ತಿಳಿಸಿದರು. ಜಾಗ, ಮೂಲಭೂತ ಸೌಕರ್ಯ ಸೇರಿದಂತೆ ಕಂಪನಿಯ ನಿರೀಕ್ಷೆಗಳನ್ನು ಪೂರೈಸಲು ಸರಕಾರ ಸಿದ್ಧವಿದೆ. ಮುಂದಿನ 2-3 ವರ್ಷದಲ್ಲಿ ಉಕ್ಕು ಕಾರ್ಖಾನೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಬಂಡಾವಳ ಹೂಡಲು ಮಿತ್ತಲ್ ಗ್ರೂಪ್ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಯಡಿಯೂರಪ್ಪ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X