ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ನನ್ನು ನೇಣಿಗೇರಿಸಲು ಒತ್ತಾಯ

By Staff
|
Google Oneindia Kannada News

Prayer prevails over anger on 1st anniversary of 26/11
ಮುಂಬೈ, ನ. 26 : ಕಳೆದ ವರ್ಷ ಮುಂಬೈನಲ್ಲಿ ನಡೆದ 26/11 ದಾಳಿಗೆ ಇಂದಿಗೆ ಒಂದು ವರ್ಷ. ಈ ದಾಳಿಯಲ್ಲಿ 160 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಒಂದನೇ ವರ್ಷದ ವರ್ಷಾಚರಣೆ ಹಿನ್ನೆಲೆಯಲ್ಲಿ ಉಗ್ರರ ದಾಳಿಗೆ ಒಳಗಾಗಿದ್ದ ತಾಜ್ ಹೋಟೆಲ್, ಟ್ರೈಡೆಂಟ್ ಹೋಟೆಲ್ ಮತ್ತು ಗೇಟ್ ವೇ ಇಂಡಿಯಾದ ಮುಂಭಾಗದಲ್ಲಿ ಸಾವಿರಾರು ಮಂದಿ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ದೀಪ ಬೆಳೆಗಿಸಿದರು.

26/11 ಅಂಗವಾಗಿ ನಗರದ ನಾರಿಮನ್ ಪಾಯಿಂಟ್ ನಿಂದ ಪ್ರಮುಖ ಬೀದಿಗಳಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆ, ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆ ಫಥಸಂಚಲನ ನಡೆಸಿದರು. ಗಿರ್ಗಮ್ ಚೌಪಟಿಯಲ್ಲಿ ಫಥಸಂಚಲವನ್ನು ಕೊನೆಗೊಳಿಸಲಾಯಿತು. ಮುಖ್ಯಮಂತ್ರಿ ಅಶೋಕ್ ಚವಾಣ್, ಉಪಮುಖ್ಯಮಂತ್ರಿ ಛಗನ್ ಭುಜಬಲ್ ಸೇರಿದಂತೆ ಅನೇತ ಸಚಿವರು, ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

26/11 ಹಿನ್ನೆಲೆಯಲ್ಲಿ ನಗರದ ಬಹುತೇಕ ಕಂಪನಿಗಳು ತಡೆವಾಗಿ ಕಚೇರಿಗಳನ್ನು ಆರಂಭಿಸಿವೆ. ಸಾವಿರಾರು ಜನ ದಾಳಿಗೊಳಗಾದ ಸ್ಥಳಗಳಿಗೆ ಭೇಟಿ ದೀಪ ಬೆಳೆಸಿದರು. ಈ ಸಂದರ್ಭದಲ್ಲಿ ಸೇರಿದ್ದ ಜನಸಾಮಾನ್ಯರು ಕಸಬ್, ಪಾಕಿಸ್ತಾನ ಹಾಗೂ ಉಗ್ರ ಸಂಘಟನೆಗಳು ಘೋಷಣೆ ಕೂಗಿದರು. ಅಲ್ಲದೇ, ಸುಮಾರು 160 ಮಂದಿ ಸಾವಿಗೆ ಕಾರಣನಾಗಿರುವ ಉಗ್ರ ಕಸಬ್ ನನ್ನು ಕೂಡಲೇ ನೇಣಿಗೇರಿಸಿ ಮೃತ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಸಂದೇಶ ಹೊಂದಿದೆ ಅನೇಕ ಫಲಕಗಳು ರಾರಾಜಿಸುತ್ತಿದ್ದವು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X