ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆಎಂಎಫ್ ಹಾಲಿನ ದರ ತುಟ್ಟಿ ಸಾಧ್ಯತೆ ?
ದರ ಏರಿಕೆ ವಿಚಾರವಾಗಿ ರಾಜ್ಯದ 13 ಹಾಲು ಒಕ್ಕೂಟಗಳು ಒಂದೊಂದು ರೀತಿಯ ಪ್ರಸ್ತಾವನೆ ಸಲ್ಲಿಸಿವೆ. ಈ ಸಂಬಂಧ ಇದೇ ತಿಂಗಳ 30 ರಂದು ಕೆಎಂಎಫ್ ಆಡಳಿತ ಮಂಡಳಿಯಲ್ಲಿ ಚರ್ಚಿ ನಡೆಯಲಿದೆ. ಸಭೆಯಲ್ಲಿ ಹಾಲು ಒಕ್ಕೂಟಗಳ ಅಧ್ಯಕ್ಷರೂ ಪಾಲ್ಗೊಳ್ಳಲಿದ್ದಾರೆ. ಬೆಲೆ ಹೆಚ್ಚಿಸಬೇಕೆ, ಬೇಡವೇ, ಹೆಚ್ಚಿಸಿದರೆ ಎಷ್ಟು ಹೆಚ್ಚಿಸಬೇಕು ಎಂದು ಕುರಿತು ತೀರ್ಮಾನಕ್ಕೆ ಬರುವ ಸಾಧ್ಯತೆಗಳಿವೆ. ನಂತರ ಸರಕಾರದ ಅನುಮತಿಗೆ ಅದನ್ನು ಕಳುಹಿಸಿಕೊಡಲಾಗುವುದು. ಸರಕಾರ ಸಮ್ಮತಿಸಿದರೆ ಜನವರಿ 1 ರಿಂದ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ.
(ದಟ್ಸ್ ಕನ್ನಡ ವಾರ್ತೆ)
Story first published: Wednesday, November 25, 2009, 12:58 [IST]