• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿ ಮಿತ್ತಲ್ ಸ್ಟೀಲ್ ಕಂಪನಿ ಆರಂಭ?

By Staff
|

ಮುಂಬೈ, ನ. 25 : ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಒಡೆತನದ ಅರ್ಸೆಲರ್ ಮಿತ್ತಲ್ ಕಂಪನಿಯೂ ರಾಜ್ಯದಲ್ಲಿ ಸ್ಟೀಲ್ ಕಂಪನಿಯೊಂದು ಸ್ಥಾಪಿಸಲು ಮುಂದೆ ಬಂದಿದೆ. ಈಗಾಗಲೇ ರಾಜ್ಯ ಸರಕಾರಕ್ಕೆ ಕಂಪನಿಯ ಮುಖ್ಯಸ್ಥರು ಮನವಿ ಸಲ್ಲಿಸಿದ್ದಾರೆ.

ರಾಜ್ಯದ ಮಟ್ಟಿಗೆ ಇದೊಂದು ಸಂತಸದ ಸುದ್ದಿಯಾಗಿದ್ದು, ರಾಜ್ಯ ಸರಕಾರ ಈ ವಿಷಯದಲ್ಲಿ ಪ್ರಾಮಾಣಿಕವಾದ ಕೆಲಸ ಮಾಡಬೇಕಿದೆ. ಕಂಪನಿಗೆ ಬೇಕಿರುವ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸರಕಾರ ಒದಗಿಸಲು ಮುಂದಾಗಬೇಕಾಗಿದೆ. ರಾಜ್ಯದಲ್ಲಿ ಸ್ಟೀಲ್ ಉದ್ಯಮ ಸ್ಥಾಪನೆ ಆಗುವುದರಿಂದ ಅಭಿವೃದ್ಧಿಯ ಜೊತೆಗೆ ಸಾವಿರಾರು ವಿದ್ಯಾವಂತರಿಗೆ ಉದ್ಯೋಗ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕೈಗಾರಿಕೆ ಮಂತ್ರಿ ಮುರುಗೇಶ ನಿರಾಣಿ ಕಾರ್ಯಪ್ರವೃತರಾಗಬೇಕು. ಸರಕಾರದ ನಿಧಾನಗತಿಯಿಂದ ಟಾಟಾ ನ್ಯಾನೋ ಕಂಪನಿ ಪಶ್ಚಿನ ಬಂಗಾಲದ ಸಿಂಗೂರ್ ನಿಂದ ಗುಜರಾತ್ ಕಡೆಗೆ ಪ್ರಯಾಣ ಬೆಳೆಸಿದ್ದು ಗೊತ್ತೆ ಇದೆ.

ಕಳೆದ 21 ರಂದು 6 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆಯ ಕಂಪನಿಯೊಂದನ್ನು ಸ್ಥಾಪಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಾಲ್ಕು ತಿಂಗಳೂಳಗೆ ಕಂಪನಿಯಲ್ಲಿ ಯಾವ ಸ್ಥಳದಲ್ಲಿ ಸ್ಥಾಪನೆ ಮಾಡಲಾಗುವುದು ಎಂಬುದನ್ನು ನಿರ್ಧರಿಸಲಾಗುವುದು. ಈಗಾಗಲೇ ಭಾರತದ ಜಾರ್ಖಂಡ್, ಒರಿಸ್ಸಾದಲ್ಲಿ ಎರಡು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಕಂಪನಿಯೂ ಮೂರನೆಯದಾಗಲಿದೆ ಎಂದು ಅರ್ಸೆಲರ್ ಮಿತ್ತಲ್ ಕಂಪನಿಯ ಭಾರತದ ಮುಖ್ಯಸ್ಥ ವಿಜಯ್ ಕುಮಾರ್ ಭಟ್ನಾಗರ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X