ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಪದ್ಮಶ್ರೀ ಕೊಡ್ಬೇಕು, ಪೂಜಾರಿ

By Staff
|
Google Oneindia Kannada News

Janardhan Poojari
ಬೆಂಗಳೂರು, ನೆ. 24 : ಕಂಡ ಕಂಡವರ ಕೈ ಕಾಲು ಹಿಡಿದು ಸಿಎಂ ಕುರ್ಚಿ ಉಳಿಸಿಕೊಂಡಿರುವ ಯಡಿಯೂರಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಲೇವಡಿ ಮಾಡಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯವೈಖರಿ ಮತ್ತು ಅವರ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ಬಿಡಿಸಿಟ್ಟರು. ಇತ್ತೀಚೆಗೆ ಬಿಜೆಪಿಯಲ್ಲಿ ಉದ್ಭವಿಸಿದ ಬಿಕ್ಕಟ್ಟಿನಲ್ಲಿ ಯಡಿಯೂರಪ್ಪ ನಡೆದುಕೊಂಡು ರೀತಿ ಅಸಹ್ಯ ತರಿಸುವಂತಿದೆ. ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ಸಾರ್ವಜನಿಕ ಸಭೆಗಳಲ್ಲಿ ಕಣ್ಣೀರಿಡುವುದು ಎಷ್ಟರ ಮಟ್ಟಿಗೆ ಸರಿ ? ಶೋಭಾ ಕರಂದ್ಲಾಜೆ ಇರುವಷ್ಟು ಧೈರ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಇಲ್ಲ ಪೂಜಾರಿ ವ್ಯಂಗ್ಯವಾಡಿದರು.

ದೇಶ ಕಂಡ ದುರ್ಬಲ ಸಿಎಂ

ರಾಜ್ಯ ನೈಸರ್ಗಿಕ ಸಂಪತ್ತನ್ನು ಕೆಲ ವ್ಯಕ್ತಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಕೊಂಡು ಅವರ ವಿರುದ್ದ ಕ್ರಮ ಜರುಗಿಸಲು ಸಾಧ್ಯವಾಗದಿದ್ದರೆ, ರಾಜ್ಯದ ಆರು ಕೋಟಿ ಜನರನ್ನು ರಕ್ಷಿಸಲು ಸಾಧ್ಯವೇ ? ಹೀಗೆ ಪ್ರಶ್ನಿಸಿದವರು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ. ಸರಕಾರಿ ಸಭೆಯಲ್ಲಿ ಗಣಿಗಾರಿಕೆ ಬಗ್ಗೆ ತಮ್ಮ ಅಸಮಾಧಾನ, ಅಸಹಾಯಕತೆ ತೋಡಿಕೊಂಡು ಸಿಎಂ, ಅವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ವಿವರಿಸಬೇಕು ಎಂದು ಆಗ್ರಹಿಸಿದರು.

ರೆಡ್ಡಿಗಳ ಕೈಗೊಂಬೆಯಾಗಿರುವ ಯಡಿಯೂರಪ್ಪ ಅವರಿಂದ ರಾಜ್ಯದ ಅಭಿವೃದ್ಧಿ ಕನಸಿನ ಮಾತು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ. ಯಡಿಯೂರಪ್ಪ ಅವರು ಧೈರ್ಯ ಮಾಡಬೇಕು. ರಾಜ್ಯ ಹಿತ ಮುಖ್ಯವೋ, ನಿಮ್ಮ ಕುರ್ಚಿ ಮುಖ್ಯವೋ ಅಥವಾ ಬಳ್ಳಾರಿ ರೆಡ್ಡಿಗಳ ಗಣಿಗಾರಿಕೆ ಮುಖ್ಯವೋ ಎನ್ನುವುದನ್ನು ತೀರ್ಮಾನಿಸಲಿ ಎಂದು ಕಿಡಿಕಾರಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X