ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ವಿದ್ಯಾರ್ಥಿಗಳು ಹಿಂದೆ

By Staff
|
Google Oneindia Kannada News

Need a minister for internet usage in karnataka
ಬೆಂಗಳೂರು, ನ. 23 : ಡಿಎನ್ ಎ ಇಂಗ್ಲಿಷ್ ಪತ್ರಿಕೆಯಲ್ಲಿ ನಿನ್ನೆ ಒಂದು ಸ್ವಾರಸ್ಯಪೂರ್ಣ ಲೇಖನ ಪ್ರಕಟವಾಗಿದೆ. ಅದರ ಪ್ರಕಾರ ಅಂತರ್ ಜಾಲ ಬಳಸುವುದರಲ್ಲಿ ಬೆಂಗಳೂರಿಗಿಂತ ಮೈಸೂರು ಮತ್ತು ಮಂಗಳೂರು ವಿದ್ಯಾರ್ಥಿಗಳು ತುಂಬ ಮುಂದಿದ್ದಾರೆ. Towns overtake cities in net usage ಎನ್ನುತ್ತದೆ ಸಮೀಕ್ಷೆಯ ಶೀರ್ಷಿಕೆ.

ಲೇಖನದ ಮುಖ್ಯಾಂಶಗಳು ಹೀಗಿವೆ :

* ಟಯರ್ II ಸಿಟಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೈಕಿ ಶೇ 90 ಮಂದಿ ಇಂಟರ್ ನೆಟ್ ಅನ್ನು ಪ್ರತಿದಿನ ಬಳಸುತ್ತಾರೆ. ಬೆಂಗಳೂರಿನ ವಿದ್ಯಾರ್ಥಿಗಳ ಬಳಕೆ ಪ್ರಮಾಣ ಶೇ 77.
* ಶೇಕಡಾ 100 ರಷ್ಟು ಮಹಾನಗರದಲ್ಲಿರುವ ವಿದ್ಯಾರ್ಥಿಗಳು ಇಮೇಲ್ ಖಾತೆ ಹೊಂದಿದ್ದರೆ ಇತರೆ ನಗರಗಳಲ್ಲಿರುವ ವಿದ್ಯಾರ್ಥಿಗಳ ಖಾತೆ ಪ್ರಮಾಣ 74 ರಷ್ಟಿದೆ.
* ಎರಡನೇ ದರ್ಜೆ ನಗರಗಳಲ್ಲಿರುವ ಶೇ 71 ರಷ್ಟು ವಿದ್ಯಾರ್ಥಿಗಳು ಪ್ರತಿದಿನ ಇಮೇಲ್ ಬಳಸುತ್ತಾರೆ. ಬೆಂಗಳೂರಿನವರ ಪ್ರಮಾಣ ಶೇ 62.

ಈ ಸಮೀಕ್ಷೆ ನಡೆಸುವುದಕ್ಕೆ ಡಿಎನ್ ಎ 1000 ವಿದ್ಯಾರ್ಥಿಗಳನ್ನು ಸಂದರ್ಶಿಸಿತ್ತು. ಸಮೀಕ್ಷೆಯನ್ನು ಬೆಂಗಳೂರು, ಮೈಸೂರು ಮತ್ತು ಮಂಗಳೂರು ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿಡಲಾಗಿತ್ತು. ಈ ಅಧ್ಯಯನದಿಂದ ಒಟ್ಟಾರೆ ಕಂಡುಬರುವ ಫಲಶ್ರುತಿ ಬೆಂಗಳೂರು ಮಹಾನಗರ ಬಿಟ್ಟು ಇತರ ನಗರಗಳಲ್ಲಿ ವಿದ್ಯಾರ್ಜನೆ ಮಾಡುವ ಯುವಕ ಯುವತಿಯರು ಇಂಟರ್ ನೆಟ್ ಬಳಕೆಯಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ ಮತ್ತು ಬಳಸುತ್ತಾರೆ ಕೂಡ.

ಏನೇ ಆಗಲಿ, ನಮ್ಮ ಕರ್ನಾಟಕ ರಾಜ್ಯದ ಸಂಪುಟದಲ್ಲಿ ಇಂಟರ್ನೆಟ್ಟಿಗೋಸ್ಕರ ಒಬ್ಬ ಸಚಿವ ಮತ್ತು ಅಂತರ್ ಜಾಲ ಮಂತ್ರಾಲಯ ಇದ್ದಿದ್ದರೆ ಚೆನ್ನಾಗಿತ್ತು. ಸರಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಇಂಟರ್ ನೆಟ್ ಬಳಸುವ ಲಕ್ಷೋಪಲಕ್ಷ ಗ್ರಾಹಕರ ತೊಂದರೆಗಳು, ನಿರೀಕ್ಷೆಗಳು ಅರ್ಥವಾಗುತ್ತಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X