ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನೆಯಿಂದ ದ್ರಾವಿಡ್ ಮೇಲೆ ಟೀಕಾ ಪ್ರಹಾರ

By Staff
|
Google Oneindia Kannada News

Rahul Dravid
ಮುಂಬೈ, ನ. 23 : ಭಾರತ ತಂಡದ ಮಾಜಿ ನಾಯಕ ಮತ್ತು ಆಟಗಾರ ರಾಹುಲ್ ದ್ರಾವಿಡ್ ಹುಟ್ಟಿದ್ದು ಮಹಾರಾಷ್ಟ್ರದ ನಾಗ್ಪುರ್ ನಲ್ಲಿ, ಮರಾಠಿ ಮೂಲದವರಾಗಿರುವ ಅವರು ಮಹಾರಾಷ್ಟ್ರಕ್ಕಿಂತ ಹೆಚ್ಚಾಗಿ ತಾವು ನೆಲೆಸಿರುವ ಕರ್ನಾಟಕದ ಮೇಲೆ ನಿಷ್ಠೆ ತೋರಿಸುತ್ತಿದ್ದಾರೆ. ದ್ರಾವಿಡ್ ಒಬ್ಬ ಮರಾಠಿಗ ಎನ್ನುವುದು ಅವರಿಗೆ ತಿಳಿದಿರಲಿ ಎಂದು ಶಿವಸೇನಾ ಸಂಸತ್ ಸದಸ್ಯ ಸಂಜಯ್ ರಾವತ್ ಪಕ್ಷದ ಮುಖವಾಣಿ 'ಸಾಮ್ನಾ' ದಲ್ಲಿ ಟೀಕಿಸಿದ್ದಾರೆ.

ಕ್ರಿಕೆಟ್ ಆಟದಿಂದ ಹಲವು ಕೋಟಿ ರೂಪಾಯಿ ಗಳಿಸಿರುವ ಸಚಿನ್ ತೆಂಡೂಲ್ಕರ್ ಇದುವರೆಗೆ ನಮ್ಮ ರಾಜ್ಯದ ಜನರಿಗೆ ಅಥವಾ ಆಟಗಾರರಿಗೆ ಯಾವ ಸಹಾಯವನ್ನೂ ಮಾಡಲಿಲ್ಲ. ತನ್ನ ಆಪ್ತ ಗೆಳೆಯ ವಿನೋದ್ ಕಾಂಬ್ಳಿಗೆ ಕೂಡ ತೆಂಡೂಲ್ಕರ್ ಸಹಾಯ ಮಾಡಲಿಲ್ಲ. ಸುನಿಲ್ ಗವಾಸ್ಕರ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾಗ ಹಲವು ಮರಾಠಿ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಿದ್ದರು. ಗವಾಸ್ಕರ್ ಒಬ್ಬ ನಿಜವಾದ ಮರಾಠಿಗ ಎನ್ನುವುದಕ್ಕೆ ಹೆಮ್ಮೆ ಆಗುತ್ತದೆ ಎಂದಿರುವ ರಾವತ್, ತೆಂಡೂಲ್ಕರ್ ಮೇಲೆ ಮತ್ತೆ ಹರಿಹಾಯ್ದಿದ್ದಾರೆ.

ರಾಹುಲ್ ದ್ರಾವಿಡ್ ಮೇಲೆ ಹೊಸ ವರಸೆ ಆರಂಭಿಸಿರುವ ಶಿವಸೇನೆ, ಮೂಲತಃ ಮರಾಠಿಗನಾಗಿರುವ ದ್ರಾವಿಡ್ ಮಹಾರಾಷ್ಟ್ರದ ಬದಲು ಕರ್ನಾಟಕದ ಮೇಲೆ ನಿಷ್ಠಾವಂತರಾಗಿದ್ದಾರೆ, ಇದನ್ನು ಶಿವಸೇನೆ ಒಪ್ಪಿಕೊಳ್ಳುವುದಿಲ್ಲ. ಗಂಗೂಲಿ ಅವರು ಬಂಗಾಳದ ಬಗ್ಗೆ ಹೆಮ್ಮೆಪಡುವಂತೆ ತೆಂಡೂಲ್ಕರ್ ಮತ್ತು ದ್ರಾವಿಡ್ ಕೂಡ ಮಹಾರಾಷ್ಟ್ರದ ಮೇಲೆ ಹೆಮ್ಮೆಪಡಲಿ ಎಂದು ಸಾಮ್ನಾಗೆ ಬರೆದಿರುವ ಲೇಖನದಲ್ಲಿ ಗುಡುಗಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X